ಬಿಪಿಎಲ್​ ರದ್ದತಿ ನೋಟಿಸ್​ಗೆ ಖಂಡನೆ

16 10 2025_BGR_RURAL-PAGE_02
ಬಿಪಿಎಲ್​ ಕಾರ್ಡ್​ ರದ್ದಿಗೆ ಮುಂದಾಗಿರುವುದನ್ನ ಖಂಡಿಸಿ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂದೆ ಕರವೇಯಿಂದ ಪ್ರತಿಭಟನೆ ಮಾಡಿ ತಹಸೀಲ್ದಾರ್​ ಮಹೇಶ್​ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್​ಎಲ್​ಎನ್​ ವೇಣು, ಉಪಾಧ್ಯಕ್ಷ ಜೋಗಳ್ಳಿಅಮ್ಮು, ಕಾರ್ಯದರ್ಶಿ ಮುಕ್ಕೇನಳ್ಳಿ ರವಿ, ನಗರ ಅಧ್ಯಕ್ಷ ಶ್ರೀನಗ ಬಶೀರ್​, ಉಪಾಧ್ಯಕ್ಷ ಮಂಜಣ್ಣ, ಕಾರ್ಯದರ್ಶಿ ಸಿರಜ್​, ರಾಮುಮಡಿವಾಳ ಇದ್ದರು.
Published on

ದೊಡ್ಡಬಳ್ಳಾಪುರ: ಬಿಪಿಎಲ್​ ಕಾರ್ಡ್​ಗಳನ್ನು ರದ್ದುಗೊಳಿಸುವ ಹುನ್ನಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಕುಮಾರ್​ ಶೆಟ್ಟಿ) ಬಣದಿಂದ ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಅಧ್ಯಕ್ಷ ಹಮಾಮ್​ ವೆಂಕಟೇಶ್​ ಮಾತನಾಡಿ, ತಾಲೂಕಿನಲ್ಲಿ 2,873 ಅಂತ್ಯೋದಯ, 4,470 ಎಪಿಲ್​, 66,120 ಬಿಪಿಎಲ್​ ಕಾರ್ಡ್​ಗಳಿವೆ. ಆದರೆ ಏಕಾಏಕಿ ಅವೈಜ್ಞಾನಿಕ ಮಾನದಂಡ ರೂಪಿಸಿ 5,700 ಮಂದಿಗೆ ನೋಟಿಸ್​ ನೀಡುವ ಮೂಲಕ ಪಡಿತರ ರದ್ದು ಮಾಡುವ ಹುನ್ನಾರಕ್ಕೆ ಇಲಾಖೆ ಮುಂದಾಗಿದೆ. ಪಡಿತರ ಚೀಟಿಗಳನ್ನು ಅನರ್ಹಗೊಳಿಸಲು ಗ್ರಾಹಕರಿಗೆ ನೋಟಿಸ್​ ನೀಡುವ ಬರದಲ್ಲಿ ಕೆಲದವು ಮಾನದಂಡ ತಯಾರಿಸಿದ್ದು, ಬಡವರ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಎಸ್​.ಎಲ್​.ಎನ್​.ವೇಣು ಮಾತನಾಡಿ, ಸರ್ಕಾರ ಬಡವರ ಬಿಪಿಎಲ್​ ಕಾರ್ಡ್​ ರದ್ದು ಮಾಡಿ, ಎಪಿಎಲ್​ ಮಾಡುವ ಉದ್ದೇಶ ಹೊಂದಿದೆ. ವಾರ್ಷಿಕ ಆದಾಯ 1.20 ಲಕ್ಷ ರೂ, 125 ಸಿಸಿ ಬೈಕ್​ಗಳು, ಸಾವಿರ ಚದರ ಅಡಿ ಮನೆ ಇರುವ ಬಡವರಿಗೆ ನೋಟಿಸ್​ ನೀಡುತ್ತಿರುವುದು ಖಂಡನೀಯ. ಕೇವಲ 500 ರೂ.ಗಳಿಗೆ ದಿನ ಕೂಲಿ ಮಾಡುವ ಬಡವನಿಗೆ ಒಟ್ಟುಗೂಡಿಸಿದರೆ ವಾರ್ಷಿಕ 1.80 ಲಕ್ಷ ರೂ. ದೊರೆಯುತ್ತದೆ. ಆದರೆ ಇಲಾಖೆ ವಾರ್ಷಿಕ 1.20 ಲಕ್ಷಕ್ಕೆ ಮಾತ್ರ ಬಿಪಿಎಲ್​ ಕಾರ್ಡ್​ ಎಂದು ರದ್ದು ಮಾಡಲು ಮುಂದಾಗಿದೆ. ಕೂಡಲೇ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವರು, ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಚರ್ಚಿಸಿ, ನೋಟೀಸ್​ ನೀಡಿರುವುದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net