ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಪ್ರಕರಣಕ್ಕೆ ಖಂಡನೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

Condemnation of Ambigara Chowdarya's idol vandalism case, demand for action against the culprits
Published on

ಇಳಕಲ್ಲ (ಗ್ರಾ):ಕಲಬುರಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿರುವ ಕೃತ್ಯ ಖಂಡಿಸಿ ಗಂಗಾಮತ ಅಂಬಿಗರ ಸಮಾಜ ೇಮಾಭಿವೃದ್ಧಿ ಸಂದ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿ ತಹಸೀಲ್ದಾರ ಅಮರೇಶ ಪಮ್ಮಾರ ಅವರಿಗೆ ಮನವಿ ಸಲ್ಲಿಸಿದರು.ಗಂಗಾಮತ ಅಂಬಿಗರ ಸಮಾಜ ೇಮಾಭಿವೃದ್ಧಿ ಸಂದ ಅಧ್ಯ ಬಸವರಾಜ ಜುಮಲಾಪುರ ಮಾತನಾಡಿ, ಕಳೆದ ವರ್ಷ ಭಕ್ತರು ಸೇರಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆದರೆ ಮೂರ್ತಿ ಭಗ್ನಗೊಳಿಸಿ, ಭಕ್ತರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಈ ಟನೆಯನ್ನು ಸಮಾಜ ಖಂಡಿಸುತ್ತದೆ. ತಪ್ಪತಸ್ಥರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಗದ್ದೆಪ್ಪ ತಪ್ಪಲದಡ್ಡಿ, ಯಮನೂರ ಹಂಚಿನಾಳ, ಯಲ್ಲಪ್ಪ ಅಂಬಿಗೇರ, ಮುತ್ತಪ್ಪ ಬುದ್ದಿನ್ನಿ, ಆನಂದ ಮಡ್ಡಿಕಾರ, ಸೀನು ಮಡ್ಡಿಕಾರ, ಸಾಯಿನಾಥ ತಪ್ಪಲದಡ್ಡಿ ಮತ್ತು ಸಮಾಜದ ಯುವಕರು ಇದ್ದರು.

ಇಳಕಲ್ಲದ ಗಂಗಾಮತ ಅಂಬಿಗರ ಸಮಾಜ ೇಮಾಭಿವೃದ್ಧಿ ಸಂದ ಪದಾಧಿಕಾರಿಗಳು ತಹಸೀಲ್ದಾರ ಅಮರೇಶ ಪಮ್ಮಾರ ಅವರಿಗೆ ಮನವಿ ಸಲ್ಲಿಸಿದರು. ಸಂದ ಅಧ್ಯ ಬಸವರಾಜ ಜುಮಲಾಪುರ, ಗದ್ದೆಪ್ಪ ತಪ್ಪಲದಡ್ಡಿ, ಯಮನೂರ ಹಂಚಿನಾಳ, ಯಲ್ಲಪ್ಪ ಅಂಬಿಗೇರ, ಮುತ್ತಪ್ಪ ಬುದ್ದಿನ್ನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net