ಬೀದಿಯಲ್ಲಿ ನಮಾಜ್ ಕೇಸ್ ವಾಪಾಸ್‌ಗೆ ಖಂಡನೆ

vhp
Published on

ಮಂಗಳೂರು: ಪ್ರಾರ್ಥನಾ ಮಂದಿರದಲ್ಲಿ ಮಾಡುವ ನಮಾಜನ್ನು ಬೀದಿಯಲ್ಲಿ ಮಾಡಿ ಸಾರ್ವಜನಿಕ ಸಂಚಾರಕ್ಕೆ ಧಕ್ಕೆಯುಂಟುಮಾಡಿದ ಪ್ರಕರಣವನ್ನು ರದ್ದುಮಾಡಿ, ಹಿಂದೂ ಸಂಘಟನೆ ಮುಖಂಡರ ಮೇಲೆ ದೂರು ದಾಖಲಿಸಿದ ವಿಚಾರವನ್ನು ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಖಂಡಿಸುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಸಂಚಾಲಕ ನರಸಿಂಹ ಮಾಣಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಬೇರೆ ಬೇರೆ ರೀತಿಯ ನಾಟಕಗಳನ್ನು ಮಾಡುತ್ತಾ ಸರ್ಕಾರದ ಕೆಲವು ಇಲಾಖೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ವ್ಯವಸ್ಥೆಗೆ ಕೈ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದರಲ್ಲೂ ಪೊಲೀಸ್ ಇಲಾಖೆಯನ್ನು ಹೆಸರಿಗೆ ಮಾತ್ರ ಇಲಾಖೆ ಅಲ್ಲದೆ ಈ ಇಲಾಖೆಗೆ ಯಾವುದೇ ಸ್ಥಿರ ನಿರ್ಧಾರ ತೆಗೆದುಕೊಳ್ಳಲು ಬಿಡುತ್ತಿಲ್ಲ. ಮಂಗಳೂರು ನಗರದ ಕಂಕನಾಡಿ ಎಂಬಲ್ಲಿ ಸಾರ್ವಜನಿಕರ ಉಪಯೋಗದ ರಸ್ತೆಯಲ್ಲಿ ಸಾರ್ವಜನಿಕ ಪ್ರಾರ್ಥನೆ ಮಾಡಿದ್ದನ್ನು ನಾವು ಹಿಂದು ಸಂಘಟನೆಯಾಗಿ ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಬೀದಿಯಲ್ಲಿ ನಮಾಜ್ ಮಾಡಿದ್ದನ್ನು ಸಮರ್ಥಿಸಿಕೊಂಡ ಹಲವರು ಹಿಂದೂಗಳ ಆಚರಣೆಗಳ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಮತಾಂಧರರು ಬಹುಸಂಖ್ಯಾತ ಹಿಂದುಗಳ ಸಂಪ್ರದಾಯ, ಆಚರಣೆ, ಪದ್ಧತಿಗಳಿಗೆ ಗೌರವ ನೀಡಿ ಜೀವನ ಸಾಗಿಸಿದರೆ ಉತ್ತಮ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳಿಗೆ ಅವರುಗಳು ಮತ್ತು ಸರ್ಕಾರ ಜವಾಬ್ದಾರಿಯಾಗಲಿದೆ. ಹಿಂದು ಸಮಾಜ ಹಿಂದುಸ್ಥಾನ ಯಾವ ರೀತಿಯಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಬೇಕು, ಎಲ್ಲಿ ಮೆರವಣಿಗೆ ಮಾಡಬೇಕು ಎಂದು ನಮಗೆ ಮತಾಂಧರರು ಹೇಳಬೇಕೆಂದು ಇಲ್ಲ. ಮತಾಂಧರರ ನಿರ್ದೇಶನಗಳು ಏನಾದರು ಇದ್ದರೆ ಅದನ್ನು ಅವರಿಗೆ ಬಟ್ಟು ಕೊಟ್ಟ ದೇಶದಲ್ಲಿ ಹೋಗಿ ಮಾಡಲಿ. ಇಲ್ಲಿ ಏನಿದ್ದರೂ ಹಿಂದುಗಳೇ ಮೊದಲು. ಹಿಂದು ಉದ್ದೇಶಿತ ಕ್ರಮಗಳೇ ಅಂತಿಮ ಎಂದರು.

ಕಳೆದ ಹಲವಾರು ವರ್ಷಗಳಿಂದ ಸರ್ಕಾರವು ಪೊಲೀಸರ ಆತ್ಮಸ್ಥೆರ್ಯವನ್ನು ಕುಗ್ಗಿಸುವಂತಹ ಕೆಲಸಗಳನ್ನು ಮಾಡುತ್ತಿರುವುದು ಸೋಚನೀಯ. ಎಲ್ಲಾ ವರ್ಗದ ಜನರಿಗೆ ಮುಖ್ಯಮಂತ್ರಿಯಾಗಿದ್ದರೂ ಒಂದು ಧರ್ಮದ ಪರವಾಗಿ ಓಲೈಕೆಯ ಕೆಲಸ ಮಾಡುತ್ತಿರುವ ಸರ್ಕಾರದ ಈ ನಡೆಗೆ ಹಿಂದೂ ಜಾರಗಣ ವೇದಿಕೆ ಮಂಗಳೂರು ವಿಭಾಗ ತೀವ್ರವಾಗಿ ಖಂಡಿಸುತ್ತದೆ ಹಾಗೂ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡುತ್ತಿದೆ ಎಂದರು.

ಹಿಂದೂ ಜಾಗರಣ ವೇದಿಕೆ ಮುಖಂಡರಾದ ಶಮಿತ್ ದರೆಗುಡ್ಡೆ, ಹರ್ಷಿತ್ ಶಕ್ತಿನಗರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net