ಅನ್ಯಾಯ, ಅಸಂಸ್ಕೃತಿ ವರ್ತನೆಗೆ ಖಂಡನೆ

h8-protest
Published on

ಹುಬ್ಬಳ್ಳಿ: ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ ಮತ್ತು ಅಸಂಸ್ಕೃತಿ ವರ್ತನೆ ಖಂಡಿಸಿ ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್, ಸಂಸ್ಕೃತಿ ಟ್ರಸ್ಟ್ ಸೇರಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮತ್ತು ಉತ್ತರ ದಿನಾಜ್‌ಪುರದಲ್ಲಿ ನಡೆದ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಈ ರೀತಿಯ ವರ್ತನೆಗಳು ದಿನೇ ದಿನೆ ಹೆಚ್ಚುತ್ತಿವೆ. ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಹಿಳಾ ಮುಖ್ಯಮಂತ್ರಿ ಇದ್ದರೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ತಹಸೀಲ್ದಾರ್ ಮೂಲಕ ಕೇಂದ್ರ ಗೃಹ ಸಚಿವರಿಗೆ ರವಾನಿಸಲಾಯಿತು.
ಪ್ರಮುಖರಾದ ಸಂಧ್ಯಾ ದೀಕ್ಷಿತ, ಅಶ್ವಿನಿ ಕಟ್ಟಿಮನಿ, ಉಮಾ ಬಾರಲೋನಿ, ಪ್ರೀತಿ ಪುತ್ಲೇಕರ, ರಜನಿ ಕಠಾರೆ, ಶ್ರೀದೇವಿ ಗರಗ, ವೀಣಾ ತಿಳವಳ್ಳಿ, ಡಾ. ಸವಿತಾ ಎನ್.ಎಸ್. ಇಂದಿರಾ ಚವ್ಹಾಣ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net