

ರಾಯಚೂರು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ವಾಹನ ಚಾಲಕ ಹಾಗೂ ನಿರ್ವಾಹಕರಿಗೆ ಹಲ್ಲೇ ಮಾಡಿದ ಎಂಇಎಸ್ ಮುಖಂಡರ ಬಂಧನ ಮಾಡಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಽಕಾರಿಗಳು ಶಣಿವಾರ ಜಿಲ್ಲಾಽಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಪ್ರತಿಬಾರಿ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಾಡಿನ ಜನರ ಭಾವನೆಗೆ ಧಕ್ಕೆ ತಂದು ತಮ್ಮ ಪುಂಡಾಟಿಕೆಗಳನ್ನು ಮುಂದುವರೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ವಾಹನ ಚಾಲಕ ಹಾಗೂ ನಿರ್ವಾಹಕರಿಗೆ ಮನಬಂದAತೆ ತಳಿಸಿ ತಮ್ಮ ಈ ಗುಂಡಾಗಿರಿಗೆ ತೋರಿದ್ದು ಶಿವರಾಮೇಗೌಡರ ಕರ್ನಾಟಕ ರಕ್ಷಣಾವೇದಿಕೆ ಖಂಡಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕನ್ನಡದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವುದು ತಿಳಿದುಕೊಂಡಿದ್ದೇವೆ.
ತಾವು ಎಂಇಎಸ್. ಗುಂಡಾಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ತಕ್ಕಪಾಠ ಕಲಿಸುವಿರೆಂದು ನಮಗೆಲ್ಲ ಭರವಸೆ ಒಂದುವೇಳೆ ಸರ್ಕಾರÀ ಉದಾಸೀನ ಭಾವನೆ ತೋರಿದರೆ ರಾಜ್ಯದ ಪ್ರತಿ ಜಿ¯್ಲÉಯಿಂದಲೂ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಳಗಾವಿ ಚಲೋ ಎಂಬ ಆಂದೋಲನಾ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಆಸಿ-ï,ಯಶೋಧರರೆಡ್ಡಿ,ಗೌಸ್ ಪಾಶ,ಮಹೆಬೂಬ್,ಅಯ್ಯಾನ್ ಇದ್ದರು.