ಕಾಂಕ್ರೀಟ್ ರಸ್ತೆ ಕಳಪೆ ಆರೋಪ

15
Published on

ಮಂಜೇಶ್ವರ: ಕಾಸರಗೋಡು ಜಿಲ್ಲಾ ಪಂಚಾಯಿತಿಯಿಂದ ಲಭಿಸಿದ 18 ಲಕ್ಷ ರೂ. ನಿಧಿಯಲ್ಲಿ ಮಂಜೇಶ್ವರದ ಚೌಕಿಯಿಂದ ಕಿಟ್ಟಂಗುಂಡಿ ತನಕ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ 5,200 ಚದರ ಮೀಟರ್‌ನಷ್ಟು ಮರು ಡಾಂಬರು ಹಾಗೂ 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

15 ಲಕ್ಷ ರೂ. ವೆಚ್ಚದಲ್ಲಿ ತರಾತುರಿಯಾಗಿ ನಿರ್ಮಿಸಿದ ರಸ್ತೆ ದಿನ ಕಳೆದಂತೆ ಗುಣಮಟ್ಟ ಕಳೆದುಕೊಂಡು ನಿರ್ಮಾಣವಾದ ಒಂದೂವರೆ ತಿಂಗಳಿಗೆ ಕಿತ್ತುಹೋಗಿ ಕಾಮಗಾರಿ ಗುಣಮಟ್ಟಕ್ಕೆ ಕನ್ನಡಿ ಹಿಡಿದಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ 6 ತಿಂಗಳಾಗುವ ಮೊದಲೇ ಕಿತ್ತು ಹೋಗುತ್ತಿದೆ. ಕಾಮಗಾರಿಗೆ ಸಂಬಂಧಿಸಿ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೊಳಪಡಿಸಬೇಕು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಂಕ್ರೀಟ್ ರಸ್ತೆಯ ಮೇಲ್ಭಾಗದ ಲೇಯರ್ ಹೋಗುವುದು ಸರ್ವೇ ಸಾಮಾನ್ಯ. ಇದನ್ನು ಹೊರತುಪಡಿಸಿ ಒಂದೇ ಒಂದು ಕಲ್ಲು ಅಲ್ಲಿ ಅಲುಗಾಡಿಲ್ಲ. ಸಾಧ್ಯವಾದಷ್ಟು ಕಾಮಗಾರಿಗೆ ಅವಶ್ಯವಿದ್ದ ಎಲ್ಲ ಸಾಮಗ್ರಿಗಳನ್ನು ಉಪಯೋಗಿಸಿಕೊಂಡೇ ಇಂಜಿನಿಯರ್ ನಿರ್ದೇಶನದಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ನಾಸಿರ್ ಇಡಿಯ ಗುತ್ತಿಗೆದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net