

ಸುಬ್ರಹ್ಮಣ್ಯ: ಜನರ ಅನುಕೂಲಕ್ಕಾಗಿ ನಡೆಸಲಾದ ವ್ಯವಸ್ಥೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಸುಬ್ರಹ್ಮಣ್ಯದ ದೇವರಗದ್ದೆ ಅಗರಿಕಜೆ ಶ್ರೀ ಆದಿಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಮುಂಭಾಗ ಸುಬ್ರಹ್ಮಣ್ಯ ಗ್ರಾ.ಪಂ. ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಹರೀಶ್ ಎಸ್.ಇಂಜಾಡಿ, ುಕ್ಕೆ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌವ್ಯಾ ಭರತ್ ಅವರನ್ನು ಸನ್ಮಾನಿಸಲಾಯಿತು. ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ, ಸದಸ್ಯ ಪವನ್ ಎಂ.ಡಿ., ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಾಧವ ಡಿ.ದೇವರಗದ್ದೆ, ಗ್ರಾ.ಪಂ. ಮಾಜಿ ಸದಸ್ಯ ಕಿಶೋರ್ ಅರಂಪಾಡಿ, ಸುರೇಶ್ ಭಟ್, ಗುತ್ತಿಗೆದಾರ ಅವಿನಾಶ್ ಪಳ್ಳಿಗದ್ದೆ, ಪ್ರಮುಖರಾದ ದಿನೇಶ್ ಎಂ.ಆರ್., ಸತೀಶ್ ಕಲ್ಲಜಡ್ಕ, ತಾರಾನಾಥ್ ಕೋನಡ್ಕ, ರತ್ನಾಕರ ಎಸ್.ಸುಬ್ರಹ್ಮಣ್ಯ, ಮಹಾಬಲೇಶ್ವರ ದೋಳ, ಶೇಷಕುಮಾರ್ ಶೆಟ್ಟಿ, ರಾಜಶೇಖರ ಶೆಟ್ಟಿ, ದೀಪಕ್ ನಂಬಿಯಾರ್, ಲೋಕೇಶ್ ಬಿ.ಎನ್., ಆನಂದ ಕಲ್ಲಜಡ್ಕ, ರಮೇಶ್ ಕಲ್ಲಜಡ್ಕ, ಅಣ್ಣು, ಮಾಧವ, ಗುರುಪ್ರಸಾದ್, ಗಣೇಶ್ ದೇವರಗದ್ದೆ, ಗಣೇಶ್ ಭಟ್, ಗುರುಪಾದ ಬೆಳ್ಳಿ, ಕಾರ್ತಿಕ್, ಲತೇಶ್, ಭುವನೇಶ್ ದೇವರಗದ್ದೆ, ತೇಜ ಕುಮಾರ್ ಅಗರಿಕಜೆ, ಉಮೇಶ್ ಜೆ. ಮೊದಲಾದವರಿದ್ದರು.