ಲಿಂಟಲ್ ಸ್ಲ್ಯಾಬ್ ತಲೆಗೆ ಬಿದ್ದು ಕಾರ್ಮಿಕ ಸಾವು

deadbody
Published on

ಬಂಟ್ವಾಳ: ಸಂಗಬೆಟ್ಟುವಿನಲ್ಲಿ ಬುಧವಾರ ಬೆಳಗ್ಗೆ ಕಟ್ಟಡ ಕಾಮಗಾರಿ ವೇಳೆ ಕಾರ್ಮಿಕನ ತಲೆಮೇಲೆ ಲಿಂಟಲ್ ಸ್ಲಾೃಬ್ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸಿದ್ದಕಟ್ಟೆ ಮಂಚಕಲ್ಲು ನಿವಾಸಿ ಸೇಸಪ್ಪ ಗೌಡ ಅವರ ಮಗ ರಮಾನಂದ ಗೌಡ (30) ಮೃತಪಟ್ಟವರು. ಸಂಗಬೆಟ್ಟುವಿನಲ್ಲಿ ಮನೆ ನಿರ್ಮಾಣದ ಕಾಮಗಾರಿಯಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಮೇಲ್ಭಾಗದ ಲಿಂಟಲ್ ಕಲ್ಲು ಅಡಿಭಾಗದಲ್ಲಿದ್ದ ರಮಾನಂದ ಅವರ ತಲೆಮೇಲೆ ಬಿದ್ದಿದ್ದು, ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೂವರು ಕಾರ್ಮಿಕರು ಮನೆ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದರೆನ್ನಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಪ್ರಸನ್ನ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಅವರು, ಅವಿವಾಹಿತರಾಗಿದ್ದು, ಮನೆಗೂ ಆಧಾರವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net