ವಸಂತ ಶಿಕ್ಷಣ ಶಿಬಿರದ ಸಮಾರೋಪ

Bhavani Nagar New New
Published on

ಹುಬ್ಬಳ್ಳಿ : ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಇಲ್ಲಿನ ಭವಾನಿ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳವರೆಗೆ ವಸಂತ ಶಿಕ್ಷಣ ಶಿಬಿರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಮೂರನೇ ದಿನದ ಸಮಾರೋಪ ಸಮಾರಂಭ ಮಾತನಾಡಿದ ಟಿಟಿಡಿ ವಿಶೇಷಾಧಿಕಾರಿ ಆನಂದತೀರ್ಥಾಚಾರ್ ಪಗಡಾಲ್, ದಾಸರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು. ಮನೆಯಲ್ಲಿ ಎಲ್ಲರಿಗೂ ಸಂಸ್ಕೃತಿ ಜೊತೆಗೆ ಭಗವಂತನ ಸ್ಮರಣೆ ನಿತ್ಯವೂ ಮಾಡಬೇಕು. ಧರ್ಮದ ಕಾರ್ಯದಲ್ಲಿ ನಡೆದರೆ ನಮ್ಮನ್ನು ಧರ್ಮವೇ ಕಾಪಾಡುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಟಿಟಿಡಿ ಸಂಚಾಲಕ ಗೋಪಾಲ ಕುಲಕರ್ಣಿ, ತಿರುಮಲದಲ್ಲಿ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ನಡೆಯುವ ಕಾರ್ಯಕ್ರಮದ ವಿವರಣೆ ನೀಡಿದರು.

ಶ್ರೀಮಠದ ವ್ಯವಸ್ಥಾಪಕ ವೇಣುಗೋಪಾಲಾಚಾರ್, ಅರ್ಚಕರಾದ ಗುರುರಾಜ ಆಚಾರ್, ಸಂಗೀತ ಗಾಯಕರಾದ ಸಂಧ್ಯಾ ಶ್ರೀನಾಥ, ಅರವಿಂದ ಬ್ಯಾಡಗಿ, ಅಶ್ವಿನಿ ಬ್ಯಾಡಗಿ, ನಗರದ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net