ಸಾಹಿತ್ಯ ಲೋಕಕ್ಕೆ ಸಂಸ್ಕೃತದ ಕೊಡುಗೆ ಅಪಾರ

9 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತದ ಎಲ್ಲ ಭಾಷೆಗಳಿಗೆ ಸಂಸ್ಕೃತ ತಾಯಿ ಭಾಷೆಯಾಗಿದೆ. ಸಾಹಿತ್ಯ ಲೋಕಕ್ಕೆ ಸಂಸ್ಕೃತದ ಕೊಡುಗೆ ಅಪಾರವಾದುದು. ವಿದ್ಯಾರ್ಥಿಗಳ ಹೆಚ್ಚೆಚ್ಚು ಭಾಷೆಗಳನ್ನು ಕಲಿತು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪ್ರಾಚಾರ್ಯೆ ಡಾ. ಅನಿತಾ ರೈ ಹೇಳಿದರು.

ನಗರದ ನೀರಲಕಟ್ಟಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಸ್ಕೃತ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಾದ ಕಾರ್ತಿಕ ಕೆ. `ಸಂಸ್ಕೃತ ಭಾಷೆಯ ಮಹತ್ವ' ಹಾಗೂ ವಿನಾಯಕ ಬಡಿಗೇರ `ರೈತ ದೇಶದ ಬೆನ್ನೆಲುಬು' ವಿಷಯ ಕುರಿತು ಸಂಸ್ಕೃತ ಭಾಷಣ ಮಾಡಿದರು.

ಸಪ್ತಾಹದಲ್ಲಿ ಸ್ತೋತ್ರ ಪಠಣ, ಭಗವದ್ಗೀತೆ ಪಠಣ, ಸಂಸ್ಕೃತ ಕಿರುನಾಟಕ ಪ್ರರ್ಶನ, ಶ್ಲೋಕ ಅಂತಾಕ್ಷರಿ, ಭಾಷಣ, ಸಂಸ್ಕೃತ ನೀತಿ ಕಥಾ ವಾಚನ ಚಟುವಟಿಕೆಗಳು ಜರುಗಿದವು.

ಉಪ ಪ್ರಾಚಾರ್ಯರಾದ ಕೃಷ್ಣ ಜೋಶಿ, ಅರವಿಂದ ಭಟ್, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಪಾರ್ಶ್ವ ಎಂ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net