ಕುಂತೂರು ಶಾರದಾಂಬ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಬಡ್ಡಿ ಕೌಶಲ ತರಬೇತಿ ಉಚಿತ ಶಿಬಿರದ ಸಮರೋಪ ನಡೆಯಿತು. ಸವಣೂರು ಗ್ರಾ.ಪಂ ಮಾಜಿ ಸದಸ್ಯ ಗಿರಿಶಂಕರ ಸುಲಾಯ ಶುಭಹಾರೈಸಿದರು.
ಗೌರವಾರ್ಪಣೆ
ಶಿಬಿರದ ಮುಖ್ಯ ತರಬೇತುದಾರ ಮೂರ್ತಿ ಎನ್.ಐ.ಎಸ್ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ನ ಅಧ್ಯಕ್ಷ ಯೋಗೀಶ್ ಎಂ.ಪಿ ಮಾಪಲ ಅಧ್ಯಕ್ಷತೆ ವಹಿಸಿದ್ದರು.
ಗಣ್ಯರ ಉಪಸ್ಥಿತಿ
ಶಾರದಾಂಬ ಭಜನಾ ಮಂದಿರದ ಗೌರವಾಧ್ಯಕ್ಷ ನಾಗಪ್ಪ ಗೌಡ ಪಾಲೆಚ್ಚಾರು, ಮಾಜಿ ಟ್ರಸ್ಟಿ ಅಶೋಕ್ ರೈ ಗಾಣಜಾಲು, ಹಿಂದೂ ಜಾಗರಣ ವೇದಿಕೆ ಕುಂತೂರು ಘಟಕದ ಸಹಸಂಚಾಲಕ ದೀಕ್ಷಿತ್ ಅನ್ನಡ್ಕ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಉದಯ್ ಬಾಣಬೆಟ್ಟು, ಕ್ಲಬ್ ಕಾರ್ಯದರ್ಶಿ ಯತೀಶ್ ಇಡಾಲ ಉಪಸ್ಥಿತರಿದ್ದರು.
ಗಣೇಶ್ ಕೇವಳ ಸ್ವಾಗತಿಸಿದರು. ಚಂದ್ರಹಾಸ ಕೆ.ಸಿ ಕುಂಟ್ಯಾನ ಕಾರ್ಯಕ್ರಮ ನಿರ್ವಹಿಸಿದರು. ಧನ್ಯಶ್ರೀ ಚಾಮೇತಡ್ಕ ವಂದಿಸಿದರು.