ಜನಾಂಗಕ್ಕೆ ಸಂಸ್ಕೃತಿ, ಆಚಾರ ವಿಚಾರ ಪ್ರಸಾರ

kambala
Published on

ಹೆಬ್ರಿ: ಹಿರಿಯರು ನಡೆಸಿಕೊಂಡು ಬಂದ ಸಂಸ್ಕೃತಿ, ಆಚಾರ ವಿಚಾರ ಮುಂದಿನ ಜನಾಂಗಕ್ಕೆ ತಿಳಿಸುವುದು ಕರ್ತವ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಹೇಳಿದರು.

ಕುಚ್ಚೂರು ಕಂಬಳ ಸಮಾರೋಪದಲ್ಲಿ ಗುರುವಾರ ಸನ್ಮಾನ ನೆರವೇರಿಸಿ ಮಾತನಾಡಿದರು. ಕುಚ್ಚೂರು ಕಂಬಳ ಸಮಿತಿ ಅಧ್ಯಕ್ಷ ನಿತ್ಯಾನಂದ ಭಟ್ ಅಧ್ಯಕ್ಷತೆ ವಹಿಸಲಿದ್ದರು. ಪವರ್‌ಮನ್‌ಗಳಾದ ಶ್ರೀನಾಥ್ ಪೂಜಾರಿ, ದಿನೇಶ್ ರಾಥೋಡ್, ಕುಚ್ಚೂರು ಕಂಬಳ ಕ್ರೀಡಾ ಸಮಿತಿ ಅಧ್ಯಕ್ಷ ನಿತ್ಯಾನಂದ ಭಟ್, ಕಾರ್ಯದರ್ಶಿ ರಮೇಶ್ ಪೂಜಾರಿ, ದೈವ ನರ್ತಕ ಸಂತೋಷ್ ಕುಮಾರ್, ಕ್ರೀಡಾಪಟು ಕೃತಿಕಾ ಅವರನ್ನು ಸನ್ಮಾನಿಸಲಾಯಿತು.

ಕುಚ್ಚೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ, ಕುಚ್ಚೂರು ಕೊಡಮಣಿತ್ತಾಯ ಧೂಮವತಿ ಗರಡಿ ಟ್ರಸ್ಟ್ ಅಧ್ಯಕ್ಷ ಕಿರಣ್ ತೋಳಾರ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ, ನಿರ್ದೇಶಕ ನವೀನ್ ಅಡ್ಯಂತಾಯ, ಉದ್ಯಮಿ ಗಣನಾಥ ಹೆಗ್ಡೆ, ದೈಹಿಕ ಶಿಕ್ಷಕ ನಿತ್ಯಾನಂದ ಶೆಟ್ಟಿ, ಕುಚ್ಚೂರು ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಉದ್ಯಮಿ ಬೋಜು ಕುಲಾಲ್, ಕುಚ್ಚೂರು ಕಂಬಳ ಕ್ರೀಡಾ ಸಮಿತಿ ಕಾರ್ಯದರ್ಶಿ ರಮೇಶ್ ಪೂಜಾರಿ ಕುಚ್ಚೂರು, ಸಹ ಕಾರ್ಯದರ್ಶಿ ಅಣ್ಣಯ ಅಂಬಿಗ, ಕೋಶಾಧಿಕಾರಿಗಳಾದ ವಿಜಯ ಪೂಜಾರಿ ಬಾದ್ಲು, ರಘುರಾಮ್ ನಾಯಕ್ ಕುಚ್ಚೂರು, ಉಪಾಧ್ಯಕ್ಷರಾದ ಆನಂದ ಶೆಟ್ಟಿ, ಶ್ರೀಧರ ಜೋಯಿಶ್, ಸತೀಶ್ ಪೂಜಾರಿ, ಆನಂದ ಪೂಜಾರಿ, ನರಸಿಂಹ ನಾಯ್ಕ, ಸತೀಶ್ ಶೆಟ್ಟಿ, ರಾಜು ಆಚಾರ್ಯ, ಉಮಾನಾಥ ಪೂಜಾರಿ, ರವಿ ಪೂಜಾರಿ, ವಿಠಲ ನಾಯ್ಕ, ಸಚಿನ್ ಪೂಜಾರಿ, ರಘು ಕುಲಾಲ್ ಇದ್ದರು.

ಫಲಿತಾಂಶ

ಹಗ್ಗ ಹಿರಿಯ ವಿಭಾಗ: ವೆಂಕಟ ಪೂಜಾರಿ ಬೈಂದೂರು ಸಸಿಹಿತ್ಲು ಪ್ರಥಮ, ಓಡಿಸಿದವರು ಮಂಜುನಾಥಗೌಡ. ಹೆಬ್ರಿ ಕುಚ್ಚೂರು, ಆನಂದ ನಿಲಯ ಶ್ರೀಹರ್ಷ ಭಟ್ ಮತ್ತು ಶ್ರೀರಾಮ್ ಭಟ್ ಕೋಣಗಳು, ಓಡಿಸಿದವರು ಪ್ರದೀಪ್ ಸೂರಾಲು.

ಹಗ್ಗ ಹಲಗೆ ಮುಕ್ತ ವಿಭಾಗ: ಶ್ರೀರಾಮ ಚೈತ್ರಾ ಪರಮೇಶ್ವರ ಭಟ್, ಓಡಿಸಿದವರು ಗಣೇಶ್ ಉಳ್ಳೂರು ಕಂದಾವರ. ಗೋಪಾಲ್ ನಾಯ್ಕ ಶಿರೂರು ಮುದ್ದು ಮನೆ ದ್ವಿತೀಯ.

ಅತಿ ಕಿರಿ ವಿಭಾಗ: ಪೇತ್ರಿ ಕನ್ನಾರು ಮಹಾಬಲ ನಾಯ್ಕ ಪ್ರಥಮ, ಮಣೂರು ಪಡುಕೆರೆ ಸೀನ ಪೂಜಾರಿ ದ್ವಿತೀಯ.

ಹಗ್ಗ ಹಿರಿಯ ವಿಭಾಗ: ದೊಂಡೆರಂಗಡಿ ಶೀನಾರ್ಬೆಟ್ಟು ರವಿ ಸುವರ್ಣ ಪ್ರಥಮ, ಓಡಿಸಿದವರು ಪ್ರದೀಪ್ ಪೂಜಾರಿ. ಸದಾಶಿವ ಶೆಟ್ಟಿ ಸಂಪಿಗೆ ಮನೆ ಬೇಳಂಜೆ ದ್ವಿತೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net