ಮಂಡ್ಯ ನಗರದ ಕಲಾಮಂದಿರ ನವೀಕರಣಕ್ಕೆ ಅಸ್ತು: ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ತೀರ್ಮಾನ

2
Published on

ಮಂಡ್ಯ: ನಿರ್ಲಕ್ಷಕ್ಕೊಳಗಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವನ್ನು 1.60 ಕೋಟಿ ರೂ ವೆಚ್ಚದಲ್ಲಿ ನವೀಕರಣ ಮಾಡುವ ತೀರ್ಮಾನಿಸಲಾಗಿದೆ. ಮಾತ್ರವಲ್ಲದೆ ಒಂದೇ ಹಂತದಲ್ಲಿ ಮಾಡಲು ಕ್ರಮ ವಹಿಸಲು ಸೂಚನೆ ನೀಡಲಾಯಿತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಲಾಮಂದಿರ, ರೈತ ಸಭಾಂಗಣ, ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡಲಾಯಿತು.

ಚಲುವರಾಯಸ್ವಾಮಿ ಮಾತನಾಡಿ, ಕಲಾಮಂದಿರ ನವೀಕರಣಕ್ಕೆ ಎರಡು ಹಂತದ ಅಂದಾಜುಪಟ್ಟಿ ತಯಾರಿಸಲಾಗಿದೆ. ಮೊದಲ ಹಂತದ ಕಾಮಗಾರಿಗೆ 63 ಲಕ್ಷ ರೂ ಈಗಾಗಲೇ ಬಿಡುಗಡೆಯಾಗಿದೆ. 2ನೇ ಹಂತದ ಕಾಮಗಾರಿಗೆ 97 ಲಕ್ಷ ರೂ ಸರ್ಕಾರದಿಂದ ಬರಬೇಕಿದೆ ಎಂದರು. ಮಧ್ಯ ಪ್ರವೇಶಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕ್ರಿಯಾಯೋಜನೆ ತಯಾರಿಸಿದವರು ಯಾರೆಂದು ಪ್ರಶ್ನಿಸಿದಾಗ ಲೋಕೋಪಯೋಗಿ ಇಲಾಖೆ ಮೂಲಕ ಎಸ್ಟಿಮೇಟ್ ಪಡೆಯಲಾಗಿದೆ ಎಂದು ಜಿಲ್ಲಾಕಾರಿ ಡಾ.ಕುಮಾರ ತಿಳಿಸಿದರು. ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಪ್ರೊ.ಜಯಪ್ರಕಾಶಗೌಡ, ಥಿಯೇಟರ್ ಎಕ್ಸ್‌ರ್ಟ್ ಮೂಲಕ ರಂಗಮಂದಿರ ನವೀಕರಣ ಸಂಬಂಧ ಅಂದಾಜು ಪಡೆಯುವುದು ಉತ್ತಮ. ಲೋಕೋಪಯೋಗಿ ಇಲಾಖೆಯವರು ಸಿವಿಲ್ ಕಾಮಗಾರಿ ಮಾಡುತ್ತಾರೆ. ಆದರೆ, ಒಂದು ರಂಗಮಂದಿರಕ್ಕೆ ಬೇಕಾದ ಸವಲತ್ತುಗಳನ್ನು ಕಲ್ಪಿಸಲು ಆ ಕ್ಷೇತ್ರ ತಜ್ಞರೇ ಇರಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವರು, ಜೆಪಿ ಅವರ ಸಲಹೆಯಂತೆ ಥಿಯೇಟರ್ ಎಕ್ಸ್‌ರ್ಟ್‌ಗಳಿಂದಲೇ ಅಂದಾಜು ಪಡೆದು, ಅದರಂತೆ ಕಾಮಗಾರಿ ನಿರ್ವಹಿಸಲು ಅಕಾರಿಗಳು ಕ್ರಮ ವಹಿಸಬೇಕು. ಎರಡು ಹಂತಗಳ ಬದಲು ಒಂದೇ ಹಂತದಲ್ಲಿ ಸಂಪೂರ್ಣ ಕಾಮಗಾರಿಯನ್ನು ಮುಗಿಸಬೇಕೆಂದು ಸೂಚಿಸಿದರು.

ಸರ್ಕಾರದಿಂದಲೇ ಪ್ರತಿಮೆಗೆ ಒತ್ತಾಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಂಡ್ಯ ಜಿಲ್ಲೆಯ ನಿರ್ಮಾತೃ. ಕನ್ನಂಬಾಡಿ ಕಟ್ಟೆಯನ್ನೂ ಕಟ್ಟಿಸುವ ಮೂಲಕ ಬರಡು ಭೂಮಿಯಾಗಿದ್ದ ಮಂಡ್ಯವನ್ನು ಹಸಿರು ನಾಡಾಗಿ ಪರಿವರ್ತಿಸಿದರು. ಅವರ ಬಗ್ಗೆ ಮಂಡ್ಯ ಜನರೆಲ್ಲರೂ ಕೃತಜ್ಞರಾಗಿರಬೇಕು. ಅದಕ್ಕಾಗಿ ನಾಲ್ವಡಿಯವರ ಪ್ರತಿಮೆ ಸ್ಥಾಪನೆಯಾಗಬೇಕು. ಸರ್ಕಾರವೇ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಸಭೆಯಲ್ಲಿದ್ದ ಸಂಘಟನೆಗಳ ಪ್ರತಿನಿಗಳು ಒಕ್ಕೊರಲಿನಿಂದ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ನಾಲ್ವಡಿ ಅವರ ಪ್ರತಿಮೆ ಸ್ಥಾಪನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಪತ್ರ ಬರೆಯಲಾಗುವುದು. ಮುಖ್ಯಮಂತ್ರಿಯೊಂದಿಗೂ ಮಾತನಾಡುತ್ತೇನೆ. ಜತೆಗೆ, ಸಾರ್ವಜನಿಕರ ಸಹಕಾರವೂ ಅಗತ್ಯ. ಜನರು ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ನೆರವು ನೀಡಬೇಕು. ವಿಧಾನ ಪರಿಷತ್ ಸದಸ್ಯರು ತಮ್ಮ ಶಾಸಕರಿಂದ ನಿಯಿಂದ ಅನುದಾನ ಕೊಡಬೇಕು. ಎಲ್ಲ ಶಾಸಕರು ವೈಯಕ್ತಿಕವಾಗಿ ನೆರವಾಗಬೇಕೆಂದು ಕೋರಿದರು.

ಜಿಲ್ಲಾಕಾರಿ ಡಾ.ಕುಮಾರ ಮಾತನಾಡಿ, ಕೃಷ್ಣಶಿಲೆಯಲ್ಲಿ ನಾಲ್ವಡಿ ಅವರ ಪ್ರತಿಮೆ ಸ್ಥಾಪನೆಗೆ ಚಿಂತಿಸಲಾಗಿದೆ. ಇದಕ್ಕಾಗಿ ಒಟ್ಟಾರೆ 35 ಲಕ್ಷ ರೂ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ. ಸಿವಿಲ್ ಕಾಮಗಾರಿಗೆ 10.83 ಲಕ್ಷ ರೂ, ಕೃಷ್ಣಶಿಲೆಗೆ 12.50 ಲಕ್ಷ ರೂ, ಗುಂಬಜ್ ಮಾದರಿಯ ಅಲಂಕಾರ ಗೋಪುರ ನಿರ್ಮಾಣಕ್ಕೆ 10 ಲಕ್ಷ ರೂ ಹಾಗೂ ಇತರ ಖರ್ಚಿಗಾಗಿ 1.66 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ಉದಯ್ ಕದಲೂರು, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎನ್.ಯತೀಶ್, ಅಪರ ಜಿಲ್ಲಾಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net