ಗ್ರಾಮ ಶಿಲ್ಪಿ 2.0 ಪ್ರದರ್ಶನದ ಸಮಾರೋಪ

New Gramshilpi new
Published on

ಹುಬ್ಬಳ್ಳಿ : ಐಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ಲಘು ಉದೊ್ಯೕಗ ಭಾರತಿಯು ಹುಬ್ಬಳ್ಳಿಯಲ್ಲಿ ಜುಲೈ 17 ರಿಂದ 23ರವರೆಗೆ ಆಯೋಜಿಸಿದ್ದ ಏಳು ದಿನಗಳ ಗ್ರಾಮ ಶಿಲ್ಪಿ 2.0 ಕುಶಲಕರ್ವಿು ಪ್ರದರ್ಶನ ಯಶಸ್ವಿಯಾಗಿ ಜರುಗಿತು.

ಗ್ರಾಮೀಣ ಕರಕುಶಲತೆಯ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲಾಯಿತು. ಕುಶಲಕರ್ವಿುಗಳು ತಮ್ಮಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಉತ್ತಮ ವೇದಿಕೆ ಒದಗಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಕುಶಲಕರ್ವಿುಗಳಿಗೆ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.

ಅತಿಥಿಯಾಗಿದ್ದ ಡಾ. ಮಹೇಶ ನಾಲವಾಡ ಹಾಗೂ ಶಿವಾನಂದ ಅವತಿ ಮಾತನಾಡಿ, ಕರಕುಶಲದ ಮಹತ್ವ ವಿವರಿಸಿದರು. ಗ್ರಾಮೀಣ ಕುಶಲಕರ್ವಿುಗಳನ್ನು ಪೋಷಿಸುವಲ್ಲಿ ಲಘು ಉದ್ಯೋಗ ಭಾರತಿಯ ಪಾತ್ರದ ಮಹತ್ವ ತಿಳಿಸಿದರು.

ಧಾರವಾಡದ ಕರಕುಶಲ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ, ಕರಕುಶಲ ವೃತ್ತಿಪರರಿಗೆ ಲಭ್ಯವಿರುವ ವಿವಿಧ ಸರ್ಕಾರಿ ಸವಲತ್ತುಗಳ ಕುರಿತು ವಿವರಿಸಿದರು.

ಧಾರವಾಡದ ಲಘು ಉದೊ್ಯೕಗ ಭಾರತಿಯ ಅಧ್ಯಕ್ಷ್ರ ರಾಜು ಪಾಟೀಲ, ಕುಶಲಕರ್ವಿು ಉತ್ಪನ್ನಗಳಲ್ಲಿ ಗುಣಮಟ್ಟ ಮತ್ತು ನಿರಂತರ ಸುಧಾರಣೆಯನ್ನು ಕಾಯ್ದುಕೊಳ್ಳುವ ಮಹತ್ವ ತಿಳಿಸಿದರು.

ಹಲವಾರು ಕುಶಲಕರ್ವಿುಗಳು ಅಭಿಪ್ರಾಯ ಹಂಚಿಕೊಂಡರು. ಧಾರವಾಡದ ಲಘು ಉದ್ಯೋಗ ಭಾರತಿಯ ಕಾರ್ಯದರ್ಶಿ ಪ್ರಸಾದ ಪಾವಟೆ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net