ವಿದ್ಯಾರ್ಥಿಗಳು ಕಲಾರಾಧನೆಗೆ ಒತ್ತು ನೀಡಬೇಕು ’ಸಂಗಮ -25’ರ ಸಮಾರೋಪದಲ್ಲಿ ಚಿತ್ರ ನಟಿ ಶೈಲಾಶ್ರೀ ಹೇಳಿಕೆ

mng---11 April scs sangama samaropa
Published on

ಮಂಗಳೂರು: ಭಾರತೀಯ ಶಿಕ್ಷಣ ಕ್ರಮದಲ್ಲಿ ಇಂದು ವಿದೇಶಿ ಸಂಸ್ಕಾರ ಹೆಚ್ಚಾಗಿ ಅನಾವರಣಗೊಳ್ಳುತ್ತಿರುವುದು ವಿಪರ್ಯಾಸ. ಆದರೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಶಿಕ್ಷಣ ಕ್ರಮದಲ್ಲಿ ಅದು ಅಷ್ಟೊಂದು ಕಂಡು ಬಂದಿಲ್ಲ. ಇಲ್ಲಿಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕಲಾರಾಧನೆಯ ಪ್ರಾಮುಖ್ಯತೆಯನ್ನು ಇನ್ನಷ್ಟು ತಿಳಿ ಹೇಳಿದರೆ ನಮ್ಮ ಶಿಕ್ಷಣ ಅರ್ಥಪೂರ್ಣ ಎಂದು ಚಿತ್ರನಟಿ ಶೈಲಾಶ್ರೀ ಮುಲ್ಕಿ ಅಭಿಪ್ರಾಯ ಪಟ್ಟರು.

ಮಂಗಳೂರು ನಗರದ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ ಇಂಟರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೋತ್ಸವ ’ಸಂಗಮ -25’ ರ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇನ್ನೋರ್ವ ಅತಿಥಿಯಾಗಿದ್ದ ರಾಹುಲ್ ಅಮೀನ್ ಮಾತನಾಡಿ, ಇಂದಿನ ಶಿಕ್ಷಣ ಕ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕಾಗಿದೆ. ಅದನ್ನು ಮಂಗಳೂರಿನ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು ಉಳಿಸುವ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಎಸ್.ಸಿ.ಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಯು.ಕೆ ಖಾಲಿದ್ ಅವರು ಸ್ಪರ್ಧೋತ್ಸವದಲ್ಲಿ ಪಾಲ್ಗೊಂಡಿದ್ದ 17 ಕಾಲೇಜುಗಳ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ’ಅಷ್ಟಾವಧಾನಿ’ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಸಿ.ಎಸ್ ರಿವರ್ ಸೈಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಹೆಲೆನ್ ಲೋಬೊ, ’ಸಂಗಮ -25’ರ ಸಂಯೋಜಕಿಯರಾದ ಪ್ರೊ. ಶ್ರೇಯಾ.ಕೆ ಹಾಗೂ ಪ್ರೊ.ವೀಕ್ಷಿತ ಉಪಸ್ಥಿತರಿದ್ದರು.

ಪ್ರೊ. ಮೇಘಶ್ರೀ ಸ್ವಾಗತಿಸಿದರು. ಪ್ರೊ. ಶ್ರೇಯಾ ಕೆ. ವಂದಿಸಿದರು. ಪ್ರೊ.ಸುಚಿತ್ರ.ಕೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net