

ಮೈಸೂರು: ಅದಮ್ಯ ರಂಗಶಾಲೆ, ಸ್ಪಂದನ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಫೆ.16ರಂದು ಸಂಜೆ 5.30 ಗಂಟೆಗೆ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಪಿಯು ಕಾಲೇಜಿನ ಸಭಾಂಗಣದಲ್ಲಿ ‘ಪಿಯು ಪಠ್ಯಾಧಾರಿತ ನಾಟಕ ಪ್ರದರ್ಶನ’ದ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾರಂಭವನ್ನು ಮಂಗಳೂರು ವಲಯದ ಆಂತರಿಕ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ಎ.ಎನ್. ಪ್ರಕಾಶ್‌ಗೌಡ ಉದ್ಘಾಟಿಸುವರು. ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಅಧ್ಯಕ್ಷತೆ ವಹಿಸುವರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಸಮಾರೋಪ ನುಡಿಗಳನ್ನಾಡುವರು. ಮುಖ್ಯಅತಿಥಿಗಳಾಗಿ ದಕ್ಷ ಪಿಯು ಕಾಲೇಜಿನ ಅಧ್ಯಕ್ಷ ಡಾ.ಬಿ.ಜಯಚಂದ್ರ ರಾಜು, ಪಿಯು ಕಾಲೇಜಿನ ಪ್ರಾಂಶುಪಾಲ ರತ್ನಾಕರ್ ಶ್ಯಾನಭೋಗ್ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪಠ್ಯವಾಗಿರುವ ಪಿ.ಲಂಕೇಶ್ ಅವರ ‘ಮುಟ್ಟಿಸಿಕೊಂಡವನು’ ಹಾಗೂ ಡಾ.ಎಚ್.ನಾಗವೇಣಿ ಅವರ ‘ಧಣಿಗಳ ಬೆಳ್ಳಿಲೋಟ’ ಕಥೆಗಳ ರಂಗ ರೂಪ ಪ್ರದರ್ಶನ ನಡೆಯಲಿದೆ ಎಂದು ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.