ಪರೋಪಕಾರಕ್ಕೆ ಎನ್‌ಎಸ್‌ಎಸ್ ಪ್ರೇರಣೆ, ಎಸಿಪಿ ಗೀತಾ ಕುಲಕರ್ಣಿ ಅಭಿಮತ

geetha
ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಶೈಕ್ಷಣಿಕ ಸಾಲಿನ ಸಮಾರೋಪ ಸಮಾರಂಭದಲ್ಲಿ ಎಸಿಪಿ ಗೀತಾ ಕುಲಕರ್ಣಿ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಶೈಲಾ ಕೆ.ಎನ್, ಡಾ.ಮಂಜುನಾಥ ಎಂ ಎಂ., ಪ್ರಾಧ್ಯಾಪಕರಾದ ಡಾ.ಚಂದ್ರಶೇಖರ್ ಕೆ, ಪ್ರೊ.ಗಂಗಾಧರ್ ಇದ್ದರು.
Published on

ಮಂಗಳೂರು : ಜವಾಬ್ದಾರಿಯಿಂದ ಮುನ್ನಡೆಯಲು ಎನ್‌ಎಸ್‌ಎಸ್ ಸಹಕಾರಿ. ಶಿಸ್ತು, ಸಹಬಾಳ್ವೆ ಜತೆಗೆ ಇನ್ನೊಬ್ಬರಿಗೆ ಸಹಾಯ ಮಾಡಲು ಎನ್‌ಎಸ್‌ಎಸ್ ಪ್ರೇರಣೆ ನೀಡುತ್ತದೆ ಎಂದು ಮಂಗಳೂರು ನಗರ ಎಸಿಪಿ ಗೀತಾ ಕುಲಕರ್ಣಿ ಹೇಳಿದರು.

ನಗರದ ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಶೈಕ್ಷಣಿಕ ಸಾಲಿನ ಸಮಾರೋಪದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಶ್ರೀನಿವಾಸಯ್ಶ ಕೆ ಮಾತನಾಡಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.

ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಶೈಲಾ ಕೆ.ಎನ್, ಡಾ.ಮಂಜುನಾಥ ಎಂ ಎಂ., ಪ್ರಾಧ್ಯಾಪಕರಾದ ಡಾ.ಚಂದ್ರಶೇಖರ್ ಕೆ, ಪ್ರೊ.ಗಂಗಾಧರ್, ಮಹಾಂತೇಶ್ ದಿಡ್ಡಿಮನಿ, ದೀಕ್ಷಿತ , ಘಟಕ ನಾಯಕಿಯರಾದ ನಂದಿನಿ , ನಿಧೀಶ ಉಪಸ್ಥಿತರಿದ್ದರು. ತ್ರಿಶಾ ಮತ್ತು ಧನ್ಯಶ್ರೀ ಅನಿಸಿಕೆಗಳನ್ನು ಹಂಚಿಕೊಂಡರು. ಅನನ್ಯ ಸ್ವಾಗತಿಸಿ,ಭೀಮವ್ವ ವಂದಿಸಿದರು,ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net