ಕಾಂಗ್ರೆಸ್‌ನಿಂದ ಒಲೈಕೆಯ ರಾಜಕಾರಣ

12 nrp 3...
Published on

ಎನ್.ಆರ್.ಪುರ: ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಹೇಳಿಕೆ ಖಂಡಿಸಿ ಪಟ್ಟಣದ ವಾಟರ್‌ಟ್ಯಾಂಕ್ ವೃತ್ತದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಆಗಿನ ಕಾಲದಲ್ಲಿಯೇ ಜವಾಹರಲಾಲ್ ನೆಹರು ರವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿನ ಮೀಸಲಾತಿ ವಿರೋಧಿಸಿದ್ದರು. ದೇಶದ ಬಗ್ಗೆ ಗೌರವ ಇಲ್ಲದೆ ವಿದೇಶದಲ್ಲಿ ಅಗೌರವಾಗಿ ಮಾತನಾಷಡುವ ರಾಹುಲ್ ಗಾಂಧಿಗೆ ದಲಿತರ, ಶೋಷಿತರ ಬಗ್ಗೆ ಕಾಳಜಿ ಇಲ್ಲ. ಅವರು ಭಾರತದಲ್ಲಿ ನಿರುದ್ಯೋಗವಿದೆ. ಭಾರತದ ಸಂವಿಧಾನದಲ್ಲಿರುವ ಮೀಸಲಾತಿ ತೆಗೆಯಬೇಕು ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್‌ಗಾಗಿ ಕೇವಲ ಒಂದು ವರ್ಗದ ಜನರನ್ನು ಓಲೈಸಿಕೊಳ್ಳಲು ಹಿಂದುಗಳು, ಎಸ್ಸಿ, ಎಸ್ಟಿಯವರಿಗೆ ಗೌರವಿಲ್ಲದಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಮೀಸಲಾತಿ ತೆಗೆಯಬೇಕೆಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ, ರಾಹುಲ್‌ಗಾಂಧಿ ಈ ಹೇಳಿಕೆ ಕಾಂಗ್ರೆಸ್‌ನ ಅಸಲಿಯತ್ತನ್ನು ತೋರಿಸಿದೆ. ಸಂವಿಧಾನದಲ್ಲಿರುವ ಮೀಸಲಾತಿ ದಲಿತರ ಹಕ್ಕು, ಕಾಂಗ್ರೆಸ್ ಭಿಕ್ಷೆಯಲ್ಲ. ರಾಹುಲ್‌ಗಾಂಧಿ ರಸ್ತೆ, ರಸ್ತೆಯಲ್ಲಿ ಕ್ಷಮೆಯಾಚಿಸಬೇಕು.ಕಾಂಗ್ರೆಸ್ ಒಳಗೆ ಏನು ಸಂಚು ಮಾಡಿದೆ, ಹೊರಗೆ ಹೇಗೆ ಇದೆ ಎಂಬುದನ್ನು ರಾಹುಲ್‌ಗಾಂಧಿ ವಿದೇಶದಲ್ಲಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ನೀಡಿ ರಾಹುಲ್‌ಗಾಂಧಿಯವರು ಅಪ್ರಬುದ್ಧ ನಾಯಕ ಎಂದು ಸಾಬೀತು ಮಾಡಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಎನ್.ಎಂ.ಕಾಂತರಾಜ್, ಕೆಸವೆ ಮಂಜುನಾಥ್, ಎ.ಬಿ.ಮಂಜುನಾಥ್, ಸುರಭಿ ರಾಜೇಂದ್ರ, ರಶ್ಮಿ ದಯಾನಂದ್, ರೀನಾ ಬೆನ್ನಿ, ಶೋಭಾ, ಎಚ್.ಡಿ.ಲೋಕೇಶ್, ಬಿ.ಎಸ್.ಆಶೀಶ್‌ಕುಮಾರ್, ಪ್ರೀತಂ, ಬೆಮ್ಮನೆ ಮೋಹನ, ಅಶ್ವನ, ಎಚ್.ಇ.ದಿವಾಕರ, ಡಿ.ಆರ್.ಶ್ರೀನಾಥ್, ಕೈಮರ ವಿಜಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net