

ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು, ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹಾಗೂ ಸಮಿತಿ ಕಾರ್ಯದರ್ಶಿಗಳು, ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಅವರು ಪ್ರತ್ಯೇಕವಾಗಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಿದರು.
ಎರಡೂ ನ್ಯಾಯಾಲಯಗಳಿಗೆ ಸಂಬಂಧಿಸಿದ 7631 ಬಾಕಿ ಪ್ರಕರಣಗಳಲ್ಲಿ 2583 ಪ್ರಕರಣಗಳನ್ನು ಕೈಗೆತ್ತಿಕೊಂಡು 2021 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದರು.
ಅಪರಾಧ ಪ್ರಕರಣಗಳಲ್ಲಿ ಎಂವಿಸಿ, ಚೆಕ್ ಬೌನ್ಸ್, ಮೆಂಟೇನೆನ್ಸ್, ಎಲ್‌ಎಸಿ ಇಪಿ, ಎಂವಿಸಿ ಇಪಿ, ಅಪರಾಧ ದಂಡ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು ಬಗೆಹರಿದವು. ಪೂರ್ವದಾವೆ (ಪಿಎಲ್‌ಸಿ ಕೇಸ್) ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್, ಕಂದಾಯ ಇಲಾಖೆಯ ಕಂದಾಯ ಅದಾಲತ್, ಬ್ಯಾಂಕಿನ ಪ್ರಕರಣ ಸೇರಿ 1944 ಪ್ರಕರಣಗಳಲ್ಲಿ 588 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
ನ್ಯಾಯಾಂಗ ಸಂಧಾನಕಾರರಾಗಿ ವಕೀಲರಾದ ಎಂ.ಎ.ಲಿಂಗಸೂರ, ವೈ.ಯಮನಪ್ಪ ಪಾಲ್ಗೊಂಡಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ವಿ.ಎಂ.ನಾಗಠಾಣ, ಎಸ್.ಆರ್.ಸಜ್ಜನ, ಎನ್.ಜಿ.ಕುಲಕರ್ಣಿ, ಎನ್.ಆರ್.ಮೊಕಾಶಿ, ಎಂ.ಆರ್.ಪಾಟೀಲ, ಬಿ.ಎಂ.ಮುಂದಿನಮನಿ, ಐ.ಎಸ್.ಹಗಟಗಿ, ಎಲ್.ಆರ್.ನಾಲತವಾಡ ಇನ್ನಿತರ ವಕೀಲರು ಭಾಗವಹಿಸಿದ್ದರು.
ಶಿರಸ್ತೆದಾರರಾದ ಎಂ.ಎ್.ಜೇವರಗಿ, ಸುರೇಶ ಬಳಗಾನೂರ, ಸಮಿತಿ ಆಡಳಿತ ಸಹಾಯಕರು, ನ್ಯಾಯಾಲಯದ ಸಿಬ್ಬಂದಿ ಅರವಿಂದ ಕುಂಬಾರ, ಎ.ಎಸ್.ಮುಜಾವರ, ಆರ್.ಎಸ್.ಕಮ್ಮಾರ, ಬಸವರಾಜ ಬೂದಿಹಾಳ, ನರ್ಮದಾ ಮರೋಳ, ಗೀತಾ ರಾಂಪುರ, ರೇಣುಕಾ ಜಾನಮಟ್ಟಿ, ಜ್ಯೋತಿ ಹೆಬ್ಬಾಳ, ಮಹಾಂತೇಶ ಹಚರೆಡ್ಡಿ, ಮಂಜುಳಾ ಹೊಸಮನಿ, ಎನ್.ಬಿ.ಮದಿಹಳ್ಳಿ, ಇಸಾಕ್ ಒಂಟಿ ಹಾಗೂ ನ್ಯಾಯಾಲಯ ಪೇದೆಗಳು ಇನ್ನಿತರರು ಸಹಕರಿಸಿದರು.