ಶ್ರೀ ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಗೀತ ಕಾರ್ಯಕ್ರಮ

Music
Published on

ಮೈಸೂರು: ಶ್ರೀ ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀರಾಮಪುರದ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಫೆ.9 ರಂದು ಸಂಜೆ 7ಕ್ಕೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಂಗನಾಥ್ ಸಂಗೀತ ಕಛೇರಿ ನೀಡಲಿದ್ದು, ಅಮೋಘ ನಡದೂರ್(ಪಿಟೀಲು), ಟಿ.ಎಸ್.ಪ್ರಮಥ್ (ಮೃದಂಗ) ಸಾಥ್ ನೀಡಲಿದ್ದಾರೆ.

ಫೆ.10 ರಂದು ಸಂಜೆ 6 ಗಂಟೆಗೆ ವಿವಿ ಮೊಹಲ್ಲಾದ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಿಂಧು ಸುಚೇತನ್ ಮತ್ತು ಸ್ಮಿತಾ ಅವರಿಂದ ದ್ವಂದ್ವ ಗಾಯನ ನಡೆಯಲಿದ್ದು, ಪೃಥ್ವಿ ಭಾಸ್ಕರ್(ಪಿಟೀಲು), ಎನ್.ವಾಸುದೇವ್ (ಮೃದಂಗ), ಕೆ.ಎಂ.ಲಿಖಿತ್ (ಘಟಂ) ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net