ಶ್ರೀ ಕೃಷ್ಣ ಗಾನಸಭಾ ವತಿಯಿಂದ ಸಂಗೀತ ಕಾರ್ಯಕ್ರಮ

Music Instruments
Published on

ಮೈಸೂರು: ಶ್ರೀ ಕೃಷ್ಣ ಗಾನಸಭಾ ವತಿಯಿಂದ ನಗರದ ಆಳ್ವಾರ್ ಕಲಾ ಭವನದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. 23 ರಂದು ಸಂಜೆ 6.30ಕ್ಕೆ ವಿದ್ವಾನ್ ಮೈಸೂರು ಎನ್.ಶ್ರೀನಾಥ್ ಅವರು ಸಂಗೀತ ಕಛೇರಿ ನೀಡಲಿದ್ದಾರೆ. ವಿದ್ವಾನ್ ಎಂ.ಡಿ.ಅರ್ಜುನ (ಪಿಟೀಲು), ವಿದ್ವಾನ್ ಪಿ.ಎಸ್.ಶ್ರೀಧರ(ಮೃದಂಗ), ವಿದ್ವಾನ್ ವಿ.ಎಸ್.ರಮೇಶ್ (ಮೋರ್ಚಿಂಗ್) ಸಾಥ್ ನೀಡಲಿದ್ದಾರೆ.

24 ರಂದು ಬೆಳಗ್ಗೆ 9.30ಕ್ಕೆ ವಿದುಷಿ ಮೇದಾ ಮಂಜುನಾಥ್ ಅವರು ಸಂಗೀತ ಕಛೇರಿ ನೀಡಲಿದ್ದು, ವಿದುಷಿ ಸಿ.ವಿ.ಶ್ರುತಿ (ವಯೋಲಿನ್), ವಿದ್ವಾನ್ ಎಂ.ಎಸ್.ಜಯರಾಮ(ಮೃದಂಗ), ವಿದ್ವಾನ್ ಎಂ.ಜೆ.ಕಿರಣ್‌ಕುಮಾರ್(ಘಟಂ) ಸಹಕಾರ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net