ಏಕಾಗ್ರತೆ ರೂಪವೇ ಇಷ್ಟಲಿಂಗ ಪೂಜೆ

14SND-01
ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದಲ್ಲಿ ಶುಕ್ರವಾರ ಸಿದ್ಧಲಿಂಗೇಶ್ವರ ಸ್ವಾಮೀಜಿ ಜಾತ್ರೋತ್ಸವ ಅಂಗವಾಗಿ ಸಾಮೂಹಿಕ ಶಿವಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಸಿರಗುಪ್ಪ ಬಸವಭೂಷಣ ಸ್ವಾಮೀಜಿ, ತೆರಿಗೆ ನಿವೃತ್ತ ಅಧಿಕಾರಿ ಪಿ.ರುದ್ರಪ್ಪ ಕುರುಕುಂದಿ ಇದ್ದರು.
Published on

ಸಿಂಧನೂರು: ಬಸವಣ್ಣ ಎಲ್ಲ ಸಮಾಜ ಬಾಂಧವರಿಗೂ ಲಿಂಗಧಾರಣೆ ಮಾಡುವ ಮಹಾದಾಸೆ ಹೊಂದಿದ್ದರು ಎಂದು ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಪಿ.ರುದ್ರಪ್ಪ ಕುರುಕುಂದಿ ಹೇಳಿದರು.

ತಾಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದಲ್ಲಿ ಶುಕ್ರವಾರ ಸಿದ್ಧಲಿಂಗೇಶ್ವರ ಸ್ವಾಮೀಜಿ ಜಾತ್ರೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಶಿವಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನಲ್ಲಿ ಅರಿಷಡ್ವರ್ಗಗಳ ನಿಯಂತ್ರಣ ಮತ್ತು ಒಳ್ಳೆಯ ಮಾರ್ಗಕ್ಕೆ ಲಿಂಗಪೂಜೆ ಮಾಡಬೇಕು. ಮನಸ್ಸಿನ ನಿಯಂತ್ರಣದಿಂದ ಎಲ್ಲವನ್ನು ಸಾಧಿಸುವ ಶಕ್ತಿ ಹೊಂದಬಹುದು. ಕೇವಲ ಮನಸ್ಸಿಲ್ಲದೆ ಕಲ್ಲು ಮಣ್ಣಿನ, ಪಂಚಲೋಹಗಳಿಗೆ ಪೂಜೆ ಮಾಡುವುದರಿಂದ ಸಾರ್ಥಕತೆ ಉಂಟಾಗುವುದಿಲ್ಲ.

ಎಲ್ಲಿಯೂ ಕಾಣದಿರುವ ನಮ್ಮಲ್ಲಿಯೇ ಅಡಗಿರುವ ಇಷ್ಟಲಿಂಗ ಧಾರಣೆಗೆ ಯಾವುದೇ ಕುಲ, ಭೇದ ಅಡ್ಡಿಯಾಗದು. ಚಂಚಲ ಮನಸ್ಸಿನಿಂದ ನೂರ ದೇವರ ನೆನೆಯುವುದಕ್ಕಿಂತ ಇಷ್ಟ ಏಕದೇವೋಪಾಸನೆ ಮಾಡಿದರೆ ಇಷ್ಟಾರ್ಥಗಳು ಮನಸ್ಸಿನಂತೆ ಸಿದ್ಧಿಸುತ್ತವೆ. ಏಕಾಗ್ರತೆ ರೂಪವೇ ಇಷ್ಟಲಿಂಗ ಪೂಜೆಯಾಗಿದೆ ಎಂದರು.

ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಮಹಾದೇವನನ್ನು ಗೆಲ್ಲುವ ಮೊದಲು ಮನಸ್ಸನ್ನು ಗೆಲ್ಲಬೇಕು. ಮನಸ್ಸು ಗೆದ್ದ ಮನುಷ್ಯ ಜೀವನದಲ್ಲಿ ಅಸಾಧರಣೆ ಸಾಧನೆ ಮಾಡುತ್ತಾನೆ. ಜಾತ್ರೆಯ ಹೆಸರಿನಲ್ಲಿ ಜನರಿಗೆ ಇಷ್ಟಲಿಂಗದ ಮಹತ್ವ, ಪರಿಕಲ್ಪನೆ ಅರ್ಥೈಹಿಸುವ ಕೆಲಸ ಮಾಡಲಾಗುತ್ತದೆಂದು ತಿಳಿಸಿದರು.

ಸಿರಗುಪ್ಪ ಬಸವ ಭೂಷಣ ಸ್ವಾಮೀಜಿ, ಪ್ರಮುಖರಾದ ಬಸವರಾಜ ಪಿ.ಕುರುಕುಂದಿ, ಮುದ್ದನಗೌಡ ಬಸಾಪುರ, ವೀರನಗೌಡ ಸಣ್ಣಗೌಡ್ರ, ಬಸನಗೌಡ ಜಿನ್ನದ್, ಬಸಲಿಂಗಪ್ಪ ಬಾದರ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net