ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಅವಶ್ಯ

4blh3 kle college
Published on

ಬೈಲಹೊಂಗಲ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಡಿಪ್ಲೊಮಾ ಕಾಲೇಜಿನಲ್ಲಿ ತಾಲೂಕಿನ ಗ್ರಾಮೀಣ ಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 15 ದಿನಗಳ ವರೆಗೆ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಕಂಪ್ಯೂಟರ್ ಬೇಸಿಕ್ಸ್, ಹಾರ್ಡವೇರ್, ಸ್‌ಟಾವೇರ್, ಇಂಟರ್‌ನೆಟ್ ಬಗ್ಗೆ ತರಬೇತಿ ನೀಡಲಾಯಿತು.

ಉಚಿತ ಕಂಪ್ಯೂಟರ್ ತರಬೇತಿ ಸರ್ಟಿಫಿಕೇಟ್ ವಿತರಣಾ ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಶ್ರೀಧರ ನಿರಡಿ ಮಾತನಾಡಿ, ಆಧುನಿಕ ಶಿಕ್ಷಣ ಕ್ಷೇತ್ರಕ್ಕೆ ಕಂಪ್ಯೂಟರ್ ಜ್ಞಾನ ಅತಿ ಅವಶ್ಯ ಮತ್ತು ಡಿಪ್ಲೊಮಾ ತಾಂತ್ರಿಕ ಶಿಕ್ಷಣ ಪಡೆಯುವುದರೊಂದಿಗೆ ಜ್ಞಾನ ಹೆಚ್ಚಿ, ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸುತ್ತವೆ ಎಂದರು.

ಪತ್ರಕರ್ತ ಪ್ರಕಾಶ ಬೆಳಗಾಂವಿ ಮಾತನಾಡಿ, ಉಚಿತ ಕಂಪ್ಯೂಟರ್ ತರಬೇತಿ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವುದು ಪ್ರಶಂಸನೀಯ ಎಂದರು. ತರಬೇತಿ ಪಡೆದ ವೈಶಾಲಿ ಸೂರ್ಯವಂಶಿ, ಶಾರದಾ ಪಾಟೀಲ, ಮಡಿವಾಳ ಚಳಕೊಪ್ಪ, ಕಸ್ತೂರಿ ದೊಡ್ಡಗೌಡರ, ತನುಶ್ರೀ ಹಿರೇಮಠ ಮಾತನಾಡಿ, ಸುಸಜ್ಜಿತ ಕಟ್ಟಡ, ಆಧುನಿಕ ಕಂಪ್ಯೂಟರ್ ಪ್ರಯೋಗಾಲಯಗಳು ಮತ್ತು ನುರಿತ ಶಿಕ್ಷಕರಿಂದ ಕಂಪ್ಯೂಟರ್ ತರಬೇತಿ ಪಡೆದಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿವಿಧ ವಿಭಾಗಗಳ ಮುಖ್ಯಸ್ಥರಾದ ಎಸ್.ಎಸ್. ಶರಣಪ್ಪನವರ, ಐ.ಎನ್. ಹಾದಿಮನಿ, ಶ್ರೀಧರ ಕಳಸಣ್ಣವರ, ವೀಣಾ ಪಾಟೀಲ, ರಚನಾ ಶಿವಸಂಗಯ್ಯನವರಮಠ, ಮತ್ಯುಂಜಯ ಸವದತ್ತಿಮಠ, ಸುಕನ್ಯಾ ಬುಡಶೆಟ್ಟಿ ಉಪಸ್ಥಿತರಿದ್ದರು. ಆರ್.ಎಂ ತೋಟಗಿ ನಿರೂಪಿಸಿದರು, ಆದಿತ್ಯಾ ಮುಪ್ಪಯ್ಯನವರಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net