

ಗದಗ: ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಹೊಳೆಯಪ್ಪ ಗೌಡ ಅಜ್ಜಣ್ಣ ಕೆ. ಪಾಟೀಲ ಇವರ ೬೮ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಶಂಕರಸಿ ಎಸ್. ರಜಪೂತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯರಾದ ಶ್ರೀ ವಿರುಪಾಕ್ಷಗೌಡ ಕೆ. ಪಾಟೀಲ ಮಾತೋಶ್ರೀ ರೇಣುಕಾ ಹೊಳೆಯಪ್ಪಗೌಡ ಪಾಟೀಲ, ಹಾಗೂ ಸಿದ್ದಲಿಂಗೇಶ್ವರ ಪಾಟೀಲ ಮಾಜಿ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷರು ವಹಿಸಿದ್ದರು. ಅತಿಥಿಗಳಾಗಿ ಶ್ರೀಮತಿ ಗೀತಾ ಗುಜಮಾಗಡಿ, ಶ್ರೀ ಬಸವರಾಜ ಕಡೇಮನಿ, ಸರ್ಪರಾಜ ಬಬರ್ಚಿ, ಅಂದಪ್ಪ ಬಿಂಗಿ, ಹೊಳೆಯಪ್ಪಗೌಡ ಪಾಟೀಲ, ಶ್ರೀಮತಿ ಯಶೋಧಾ ಪಾಟೀಲ, ಶ್ರೀಮತಿ ರುತ್ವಿ ಸಿದ್ದಲಿಂಗೇಶ ಪಾಟೀಲ ವಹಿಸಿದ್ದರು. ಪ್ರಥಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಪ್ರತಿಮೆಗೆ ಹಾಗೂ ದಿ. ಹೊಳೆಯಪ್ಪಗೌಡ ಅಜ್ಜಣ್ಣ ಪಾಟೀಲ ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಶಂಕರ ಎಸ್. ರಜಪೂತ ಮಾತನಾಡಿ ದಿವಂಗತ ಹೊಳೆಯಪ್ಪಗೌಡ ಅಜ್ಜಣ್ಣ ಪಾಟೀಲ ಇವರು ಗದಗ ಜಿಲ್ಲಾ ಪಂಚಾಯತನ ಉಪಾಧ್ಯಕ್ಷರಾಗಿದ್ದಾಗ ಬುದ್ಧಿ ಮಾಂದ್ಯ ಮಕ್ಕಳ ವಸತಿ ನಿಲಯದ ಕಟ್ಟಡಕ್ಕೆ ೩೦ ತಗಡುಗಳನ್ನು ಕೊಡುಗೆ ನೀಡಿದ್ದನ್ನು ಸ್ಮರಿಸಿಕೊಂಡರು. ಹಾಗೂ ದಿವಂಗತ ಹೊಳೆಯಪ್ಪಗೌಡ ಕೆ. ಪಾಟೀಲ ಇವರ ಜನ್ಮದಿನಾಚರಣೆಯನ್ನು ಪ್ರತಿ ವರ್ಷ ಡಿಸೆಂಬರ ೨೭ ರಂದು ಶಾಲೆಯಲ್ಲಿ ಆಚರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಸವರಾಜ ಕಡೇಮನಿಯವರು ಮಾತನಾಡಿ ತಂದೆಯವರಾದ ಹೊಳೆಯಪ್ಪಗೌಡ ಪಾಟೀಲರವರು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಯುತ ಸಿದ್ದಲಿಂಗೇಶ ಪಾಟೀಲ ಮುನ್ನಡೆಯುತ್ತಿರುವುದು ಸಂತೋಷದಾಯಕದ ವಿಚಾರವಾಗಿದೆ ಎಂದು ತಿಳಿಸಿದರು. ಶ್ರೀಯುತ ವಿರುಪಾಕ್ಷಗೌಡ ಪಾಟೀಲ ಮಾತೋಶ್ರೀ ರೇಣುಕಾ ಹೊಳೆಯಪ್ಪಗೌಡ ಅಜ್ಜಣ್ಣ ಪಾಟೀಲ ಹಾಗೂ ಶ್ರೀಯುತ ಸಿದ್ದಲಿಂಗೇಶ್ವರ ಪಾಟೀಲ ದಂಪತಿಗಳನ್ನು ಮಂಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಶೇಷ ಶಾಲೆಯ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಸಿದ್ದಲಿಂಗೇಶ್ವರ ಪಾಟೀಲ ಮಾಜಿ ಜಿಲ್ಲಾಪಂಚಾಯತ ಅಧ್ಯಕ್ಷರು ಇವರು ಮಾತನಾಡಿ ತಮ್ಮ ತಂದೆಯವರ ಜನ್ಮದಿನ ಪ್ರಯುಕ್ತ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳಿಗಾಗಿ ಐದು ಕಂಪ್ಯೂಟರ ಕೊಡುಗೆ ನೀಡುವುದರಲ್ಲದೇ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ಮತ್ತು ತಂದೆಯವರ ಹೆಸರಿನಲ್ಲಿ ಚಾರ್ಟಿಟೇಬಲ್ ಟ್ರಸ್ಟ್ ಮೂಲಕ ಅನೇಕ ಜನಪರ ಕೆಲಸಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. ಶಾಲೆಯ ಪ್ರದಾನ ಗುರುಗಳಾದ ವಿರೇಂದ್ರಸಿAಗ ರಜಪೂತ ಸರ್ವರನ್ನೂ ಸ್ವಾಗತಿಸಿದರು.
ಪಾಟೀಲ ಕುಟುಂಬದ ಸದಸ್ಯರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂದರ್ಭದಲ್ಲಿ ವಿಶೇ಼ಷ ಶಾಲೆಯ ಶಿಕ್ಷಕರಾದ ಎನ್. ಆರ್. ಸಿನ್ನೂರ ಕಾರ್ಯಕ್ರಮ ನಿರೂಪಿಸಿದರು. ವಿನಾಯಕಸಿಂಗ್ ಎಸ್. ರಜಪೂತ ವಿಶೇಷ ಶಿಕ್ಷಕ ವಂದಿಸಿದರು.
ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಬುದ್ಧಿಮಾಂದ್ಯ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.