ಆಧುನಿಕ ಶಿಕ್ಷಣದಲ್ಲಿ ಕಂಪ್ಯೂಟರ್ ಕಲಿಕೆಗೆ ಮಹತ್ವದ ಸ್ಥಾನ : ಶಾಸಕ ಡಾ.ಭರತ್ ಶೆಟ್ಟಿ ಅನಿಸಿಕೆ

New Project (5)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ತಿರುವೈಲಿನ ಸರ್ಕಾರಿ ಶಾಲೆ ಉಳಿಸಿ, ಬೆಳೆಸುವಲ್ಲಿ ಸ್ಥಳೀಯರ ಪಾತ್ರ ಮತ್ತು ಪ್ರಯತ್ನ ಬಹಳಷ್ಟಿದೆ. ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕ ವರ್ಗ ಇಲ್ಲಿದೆ. ಆಧುನಿಕ ಶಿಕ್ಷಣದಲ್ಲಿ ಕಂಪ್ಯೂಟರ್ ಕಲಿಕೆಗೆ ಮಹತ್ವದ ಸ್ಥಾನವಿದ್ದು, ಇಲ್ಲಿನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಲಾಭ ಸಿಗಲಿ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಶತಮಾನೋತ್ಸವ ಆಚರಿಸುತ್ತಿರುವ ವಾಮಂಜೂರು ತಿರುವೈಲಿನ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ತರಗತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು.

ಮೇಯರ್ ಮನೋಜ್ ಕುವಾರ್ ಕೋಡಿಕಲ್ ಕಂಪ್ಯೂಟರ್ ತರಗತಿ ಉದ್ಘಾಟಿಸಿದರು. ಕಂಪ್ಯೂಟರ್ ತರಗತಿಗೆ ಬೆಂಗಳೂರಿನ ಎಂಸಿಕೆಎಸ್ ಎಫ್‌ಎಫ್‌ಎಚ್ ಫೌಂಡೇಶನ್ 8 ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದು, ಸುಯೇಶ್ ಇಂಡಿಯಾ ಲಿಮಿಟೆಡ್ ಕಂಪ್ಯೂಟರ್ ಟೇಬಲ್ ಒದಗಿಸಿದೆ. ಸುಯೇಜ್ ಕಂಪನಿಯ ಪಿಆರ್‌ಒ ಡಾ.ರೇಷ್ಮಾ ಉಳ್ಳಾಲ್, ಶಿಕ್ಷಣ ಇಲಾಖೆಯ ಸಿಆರ್‌ಪಿ ಪುಷ್ಪಾವತಿ, ಶಾಲಾ ಹಳೇ ವಿದ್ಯಾರ್ಥಿ(ಕತಾರ್ ಕೆಮಿಕಲ್ ಕಂಪನಿಯ ನಿವೃತ್ತ ಉನ್ನತಾಧಿಕಾರಿ) ಪ್ರವೀಣ್ ರಾವ್ ಮಾತನಾಡಿದರು.

ಶತಮಾನೋತ್ಸವಕ್ಕೆ ದಿನಾಂಕ ನಿಗದಿ: ಮುಂದಿನ ವರ್ಷ ಶಾಲೆಯಲ್ಲಿ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸಲಾಯಿತು. 2025ರ ಏಪ್ರಿಲ್ 5 ಮತ್ತು 6ರಂದು ಶತಮಾನೋತ್ಸವ ಕಾರ್ಯಕ್ರಮ ಜರುಗಲಿದೆ. ಶತಮಾನೋತ್ಸವ ಆಚರಣೆ ಸ್ಮರಣಾರ್ಥ ಕಚೇರಿ ಸಹಿತ 4 ತರಗತಿ ಕಟ್ಟಡ ಹಾಗೂ ಸಭಾಗೃಹ ನಿರ್ಮಾಣಗೊಳ್ಳುತ್ತಿದ್ದು, ವಾಮಂಜೂರು ಸಾರ್ವಜನಿಕ ಗಣೋಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕುವಾರ್ ಮತ್ತು ನಿವೃತ್ತ ಶಿಕ್ಷಕಿ ಕೆ.ಶೋಭಾ ದೇಣಿಗೆ ಚೆಕ್ ನೀಡಿದರು.

ಕಾರ್ಪೋರೇಟರ್ ಹೇಮಲತಾ ರು ಸಾಲ್ಯಾನ್, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರತೋಷ್ ಮಲ್ಲಿ, ಸುಯೇಜ್ ಕಂಪನಿಯ ಪಿಆರ್‌ಒ ಡಾ.ರೇಷ್ಮಾ ಉಳ್ಳಾಲ್, ಕಂಪನಿಯ ಅಧಿಕಾರಿ ವಿದಿಶ್ ಶೆಟ್ಟಿ, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ರಿಯಾಝ್ ವಾಮಂಜೂರು, ಸಿಆರ್‌ಪಿ ಪುಷ್ಪಾವತಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು.

ಶಾಲಾ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ್ ಶೆಟ್ಟಿ ವಾಮಂಜೂರು, ರು ಸಾಲ್ಯಾನ್, ಪುರುಷೋತ್ತಮ ಬಿ., ಗಿರೀಶ್ ಆಚಾರ್ಯ, ದಿನೇಶ್ ಜೆ.ಕರ್ಕೇರ, ರಾಜೀವ ಶೆಟ್ಟಿ ಸಲ್ಲಾಜೆ ಮತ್ತಿತರರಿದ್ದರು. ಶಿಕ್ಷಕ ಗೋಪಾಲ ಯು. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net