

ಮಡಿಕೇರಿ:
ಮಹಾತ್ಮ ಗಾಂಧೀಜಿಯವರು ಇಡೀ ಜಗತ್ತೇ ನಿಬ್ಬೆರಗಾಗುವಂತ, ಇನ್ನೊಬ್ಬರಿಗಾಗಿ ಬದುಕನ್ನು ಸವೆಸಿದ ಮಹಾನ್ ಚೇತನ. ಗಾಂಧಿಜಿಯವರನ್ನು ಹಾಗೂ ಅವರ ವಿಚಾರಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವುದು, ದಾಟಿಸುವುದು ಎಲ್ಲರ ಜವಾಬ್ದಾರಿಯಾಗಿದೆ.
ಆ ದಿಸೆಯಲ್ಲಿ ಮಹಾತ್ಮ ಗಾಂಧಿಜಿಯವರ 156 ನೇ ಜಯಂತಿಯನ್ನು ಇಂದು ಆಚರಿಸಲಾಯಿತು, ಈ ಸಂದರ್ಭದಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳವಳಿ, ಸರಳತೆ, ಅಹಿಂಸಾ ಮಾರ್ಗ ಸಹಬಾಳ್ವೆ, ಅಸ್ಪ್ರಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಮೂರು ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3 ಸಾವಿರ ರೂ. ದ್ವಿತೀಯ 2 ಸಾವಿರ ರೂ ಹಾಗೂ ತೃತೀಯ ಸ್ಥಾನಕ್ಕೆ 1 ಸಾವಿರ ರೂ ನಗದು ಬಹುಮಾನ ನೀಡಲಾಯಿತು.
ಆ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ವಿವರ ಇಂತಿದೆ. ಪ್ರೌಢಶಾಲಾ ವಿಭಾಗ;- ಪಿ.ಎಸ್.ಯಶಸ್ವಿ (ಪ್ರಥಮ) 9 ನೇ ತರಗತಿ, ಸರ್ಕಾರಿ ಪ್ರೌಡಶಾಲೆ, ಹಾಕತ್ತೂರು ಮಡಿಕೇರಿ ತಾಲ್ಲೂಕು, ಕೆ.ಆರ್.ಲಿಪೀಕ್ಷಾ (ದ್ವಿತೀಯ) 9 ನೇ ತರಗತಿ, ಡಿ ವಿಭಾಗ ಸಂತ ಮೈಕಲರ ಪ್ರೌಢಶಾಲೆ, ಮಡಿಕೇರಿ, ಡಿ.ಎಂ ಚರಿತ (ತೃತೀಯ) 9ನೇ ತರಗತಿ, ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ, ಸೋಮವಾರಪೇಟೆ.
ಪದವಿ ಪೂರ್ವ ವಿಭಾಗದಿಂದ:- ಬಿ.ಆರ್.ನವ್ಯ(ಪ್ರಥಮ) ಮೂರ್ನಾಡು ಪದವಿ ಪೂರ್ವ ಕಾಲೇಜು, ಮೂರ್ನಾಡು, ಎ.ಆರ್ ಮೋಕ್ಷಾ (ದ್ವಿತೀಯ) ಸರ್ಕಾರಿ ಪದವಿ ಪೂರ್ವ ಕಾಲೇಜು, ಮಡಿಕೇರಿ, ಯು.ಎನ್ ಚಂದನ(ತೃತೀಯ) ಲಯನ್ಸ್ ಪಿಯು ಕಾಲೇಜು, ವಿರಾಜಪೇಟೆ.
ಪದವಿ/ ಸ್ನಾತಕೋತ್ತರ ಪದವಿ ವಿಭಾಗದಿಂದ:- ಯು.ಆರ್.ರಕ್ಷಿತ್ ಕುಮಾರ್(ಪ್ರಥಮ), ತೃತೀಯ ಬಿಸಿಎ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ, ಎಸ್.ಮಂಜುಳ(ದ್ವಿತೀಯ) ತೃತೀಯ ಬಿಸಿಎ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ, ಕೀರ್ತನ(ತೃತೀಯ) ತೃತೀಯ ಬಿ.ಎ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಇವರಿಗೆ ನಗದು ಬಹುಮಾನ ನೀಡಲಾಯಿತು.