

ಬೈಲಕುಪ್ಪೆ: ರಾಸುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರದ ಲಸಿಕೆಯನ್ನು ರೈತರು ಹಾಕಿಸಬೇಕು ಎಂದು ಹುಣಸವಾಡಿ ಪಶು ವೈದ್ಯಾಧಿಕಾರಿ ಡಾ.ರವಿಕುಮಾರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮದಲ್ಲಿ ಗುರುವಾರ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡಿ ಮಾತನಾಡಿದರು. ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹೊನ್ನೂರು, ಮಂಚದೇವನಹಳ್ಳಿ, ತಿರುಮಲಪುರ, ಚಿಕ್ಕಹೊನ್ನೂರು, ಲಕ್ಷ್ಮಿಪುರ, ಟಿಬೇಟಿಯನ್ 25 ಕ್ಯಾಂಪ್‌ಗಳು ಸೇರಿದಂತೆ 3480ಕ್ಕೂ ಹೆಚ್ಚು ರಾಸುಗಳಿಗೆ ಕಾಲುಬಾಯಿ ಜ್ವರ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಉಚಿತವಾಗಿ ಲಸಿಕೆ ನೀಡುತ್ತಿದ್ದು ನಿರಂತರವಾಗಿ 20 ದಿನಕ್ಕೂ ಹೆಚ್ಚು ಸಿಬ್ಬಂದಿ ಮನೆ ಬಾಗಿಲಿಗೆ ಹೋಗಿ ರಾಸುಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಬೈಲಕುಪ್ಪೆ ಹಿರಿಯ ಪಶು ವೈದ್ಯ ಪರೀಕ್ಷಕ ನಾಗರಾಜು, ಸಹಾಯಕ ಕಾರ್ತಿಕ್, ಪಶು ಸಖಿ ಜ್ಯೋತಿ ಇತರರು ಇದ್ದರು.