ಕಾರ್ಮಿಕರ ಸಮಸ್ಯೆ ಬಗೆಹರಿಸಲು ಒತ್ತಾಯ

MANAVI
Published on

ಮುಂಡರಗಿ: ಕಟ್ಟಡ ಕಾರ್ಮಿಕರ ಮಕ್ಕಳ 2021-22ನೇ ಸಾಲಿನ ಶೈಕ್ಷಣಿಕ ಸಹಾಯಧನ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಡಾ. ಬಿ.ಆರ್. ಅಂಬೇಡ್ಕರ್ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ, ಇತರ ಕಟ್ಟಡ ಕಾರ್ಮಿಕ ಸಂಘಟನೆ ಕಾರ್ಯಕರ್ತರು ತಹಸೀಲ್ದಾರ್ ಧನಂಜಯ್ ಎಂ. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಅಡಿವೆಪ್ಪ ಚಲವಾದಿ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಮೂರು ವರ್ಷ ಕಳೆದರೂ ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ಅಂತ್ಯಕ್ರಿಯೆ ಸಹಾಯಧನ, ಮತ್ತಿತರರ ಸಹಾಯಧನ ವಿಳಂಭವಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ತಾಲೂಕಿನ ಕಾರ್ಮಿಕ ಇಲಾಖೆಗೆ ಕಾಯಂ ಕಾರ್ಮಿಕ ನಿರೀಕ್ಷಕರನ್ನು ನಿಯೋಜಿಸಬೇಕು. ಕಾರ್ಮಿಕ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿಯನ್ನು ಕಡ್ಡಾಯ ಎಂಬ ಆದೇಶ ಹಿಂಪಡೆಯಬೇಕು. ಬೋಗಸ್ ಕಾರ್ಡ್ ನಿಯಂತ್ರಿಸಿ ನೈಜ ಕಾರ್ಮಿಕರಿಗೆ ಮಾತ್ರ ನವೀಕರಣ ಕಾರ್ಡ್ ಮಾಡಬೇಕು. ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬಸಯ್ಯ ಡಂಬಳಮಠ, ಮೈಬೂಬ್ ತಂಬ್ರಳ್ಳಿ, ಪ್ರಕಾಶ ದೊಡ್ಡಮನಿ, ಯಲ್ಲಪ್ಪ ಭಜಂತ್ರಿ, ಹುಚ್ಚಪ್ಪ ಭಜಂತ್ರಿ, ಹನುಮಂತಪ್ಪ ಭಜಂತ್ರಿ, ನಾಗರಾಜ ರಾಮೇನಹಳ್ಳಿ, ಹುಲಗಪ್ಪ ಬಂಡಿವಡ್ಡರ, ಹಸನ್ ಅಳವಂಡಿ, ತಿಪ್ಪೇಶ ರಾಯದುರ್ಗ, ಯಲ್ಲಪ್ಪ ಕಂಬಳಿ, ಶರೀಫಸಾಬ್ ಹಣಗಿ, ಮಂಜುನಾಥ ಗದಗಿನ, ಸಿದ್ದಲಿಂಗಪ್ಪ ಪವಾಡಿ, ಕೋಟೇಶ ಕಲ್ಲಳ್ಳಿ, ವೀರೇಶ ಮಾಂಡ್ರೆ, ಮಂಜುಳಾ ವಾರದ, ನೀಲಮ್ಮ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net