

ಕಾರವಾರ: ಕನ್ನಡ ಸಿನಿಮಾ ಪ್ರದರ್ಶಿಸುವಂತೆ ಕರವೇ ಪ್ರವೀಣ ಶೆಟ್ಟಿ ಹಣದ ಕಾರ್ಯಕರ್ತರು ನಗರದ ಗೀತಾಂಜಲಿ ಚಿತ್ರ ಮಂದರಕ್ಕೆ ಮುತ್ತಿಗೆ ಹಾಕಿ ಒತ್ತಾಯಿಸಿದ ಘಟನೆ ಶನಿವಾರ ನಡೆಯಿತು.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಬಿಡುಗಡೆಯಾಗಿದ್ದು, ತೆಲಗು ಹಾಗೂ ತಮಿಳು ಭಾಷೆಯ ಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ. ಅದೇ ಚಿತ್ರ ಕನ್ನಡದಲ್ಲೂ ಡಬ್ ಆಗಿದ್ದು, ಅದನ್ನು ಪ್ರದರ್ಶಿಸದಿರುವುದು ಕನ್ನಡಕ್ಕೆ ಮಾಡುವ ಅವಮಾನ ಎಂದು ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕು ಘಟಕದ ಕಾರ್ಯಕರ್ತರು ಅಧ್ಯಕ್ಷ ಅಕ್ಷಯ ಬಿ.ಎಸ್.ನೇತೃತ್ವದಲ್ಲಿ ಆಕ್ಷೇಪಿಸಿದರು.
ಇದನ್ನೂ ಓದಿವೆಜಿಟೆಬಲ್ ಡೇ ಕಾರ್ಯಕ್ರಮ
ಸ್ಥಳಕ್ಕಾಗಮಿಸಿದ ಚಿತ್ರ ಮಂದಿರದ ಮಾಲೀಕ ರಾಹುಲ್ ಬೋರ್ಕರ್. ಕನ್ನಡದ ಬಗ್ಗೆ ನಮಗೂ ಅಭಿಮಾನವಿದೆ. ಆದರೆ, ಕನ್ನಡ ಡಬ್ಬಿಂಗ್ ಪೂರೈಕೆಯಾಗಿಲ್ಲ ಎಂದರು. ತಕ್ಷಣ ವಿತರಕರನ್ನು ಸಂಪರ್ಕಿಸಿ ದಿನದ ಒಂದು ಶೋ ಕನ್ನಡದಲ್ಲಿ ಓಡಿಸುವುದಾಗಿ ಸ್ಥಳದಲ್ಲೇ ಭರವಸೆ ನೀಡಿದರು.
ಸಿಪಿಐ ಸಿದ್ದಪ್ಪ ಬಿಳಗಿ, ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು.