ವಾಣಿಜ್ಯ ಮಳಿಗೆಗಳನ್ನು ಪ.ಜಾತಿ, ಪಂಗಡಕ್ಕೆ ಮೀಸಲಿರಿಸಲು ಒತ್ತಾಯ

29 ckm 7
ಚಿಕ್ಕಮಗಳೂರು ಶಿರಸ್ತೆದಾರ್ ಹೇಮಂತ್‌ಕುಮಾರ್‌ಗೆ ಮನವಿ ಸಲ್ಲಿಸಿದ ಬಿಜೆಪಿ ಎಸ್‌ಸಿ ಘಟಕದ ಮುಖಂಡರುಗಳು ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಕುರುವಂಗಿ ವೆಂಕಟೇಶ್, ಬಿ.ರೇವನಾಥ್, ಹಂಪಯ್ಯ, ಜಗದೀಶ್, ಧನಂಜಯ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಮೀಸಲಿಡಬೇಕು ಎಂದು ಬಿಜೆಪಿ ಎಸ್‌ಸಿ ಘಟಕದ ಮುಖಂಡರುಗಳು ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಕೆ.ಎಂ.ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಎಸ್ಸಿ, ಎಸ್ಟಿ ಜನಾಂಗದ ನಿರುದ್ಯೋಗ ಯುವಕ-ಯುವತಿಯರಿಗೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ದಲಿತ ಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರದ ಮಾಜಿ ಶಾಸಕ ಸಿ.ಟಿ.ರವಿ ಅವರು ೨೦೨೦ರಲ್ಲಿ ಸರ್ಕಾರಕ್ಕೆ ಪತ್ರವನ್ನು ಬರೆದು ಪರಿಶಿಷ್ಟ ಜಾತಿ, ಪಂಗಡದ ಜನಾಂಗದವರ ವ್ಯಾಪಾರ ಉz್ದೆÃಶಕ್ಕಾಗಿ ೩ ಕೋಟಿ ಅನುದಾನವನ್ನು ಸ್ವಬಲದಿಂದ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿದರು.
ವಾಣಿಜ್ಯ ಮಳಿಗೆಗಳು ಲೋಕೋಪಯೋಗಿ ಇಲಾಖೆಯವರು ೩ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿ, ಎಸ್ಸಿ, ಎಸ್ಟಿ ನಿರುದ್ಯೋಗಳಿಗೆ ನೀಡಬೇಕೆಂದಿದೆ. ಆದರೆ ನಗರಸಭೆಯವರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಾಮಾನ್ಯ ವರ್ಗಗಳಿಗೆ ಮಳಿಗೆಗಳನ್ನು ನೀಡುತ್ತಿರುವುದು ಸಮುದಾಯಕ್ಕೆ ಎಸಗಿರುವ ದೊಡ್ಡ ವಂಚನೆಯಾಗಿದೆ ಎಂದು ಆರೋಪಿಸಿದರು.
ಹೀಗಾಗಿ ನಗರಸಭೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯನ್ನು ಮೊಟಕುಗೊಳಿಸಿ ಪರಿಶಿಷ್ಟ ಜಾತಿ, ಪಂಗಡದ ಯುವಕ-ಯುವತಿಯರಿಗೆ ನೀಡಬೇಕು. ಒಂದು ವೇಳೆ ನಿರ್ಲಕ್ಷö್ಯವಹಿಸಿದರೆ ನಗರಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಘಟಕದ ನಗರ ಮಂಡಲ ಉಪಾಧ್ಯಕ್ಷ ಹಿರೇಮಗಳೂರು ಬಿ.ರೇವನಾಥ್, ಗ್ರಾಮಾಂತರ ಸಹ ವಕ್ತಾರ ಹಂಪಯ್ಯ, ಮುಖಂಡರಾದ ಜಗದೀಶ್, ಧನಂಜಯ್, ಶಿವಕುಮಾರ್, ಧರ್ಮರಾಜ್, ಶಿವಪ್ರಸಾದ್, ನಾಗಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net