ಸಂಭಾವನೆ ನೀಡುವಂತೆ ಒತ್ತಾಯ

16.npk-2
Published on

ನಾಪೋಕ್ಲು: ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಉಪನ್ಯಾಸಕರು ಹಾಗೂ ಮುಖ್ಯ ಶಿಕ್ಷಕರು ಮಾಸ್ಟರ್ ಟ್ರೈನರ್ಸ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಇದುವರೆಗೂ ಯಾವುದೇ ರೀತಿಯ ಸಂಭಾವನೆ ದೊರಕಿಲ್ಲ ಎಂದು ವಿರಾಜಪೇಟೆ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಲಾಲ್‌ಕುಮಾರ್ ತಿಳಿಸಿದ್ದಾರೆ.

ಶೀಘ್ರದಲ್ಲೇ ಲೋಕಸಭೆ ಚುನಾವಣೆ ಬರುವುದರಿಂದ ಮಾಸ್ಟರ್ ಟ್ರೈನರ್ಸ್ ಆಗಿ ಕರ್ತವ್ಯ ನಿರ್ವಹಿಸಿರುವ ಎಲ್ಲರಿಗೂ ಸಂಭಾವನೆಯನ್ನು ನೀಡಬೇಕು. ಈ ಬಗ್ಗೆ ವಿರಾಜಪೇಟೆ ತಾಲೂಕಿನ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸುತ್ತೇವೆ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ನೀಡಬೇಕಾಗಿರುವ ಸಂಭಾವನೆಯನ್ನು ತಾಲೂಕಿನ ದಂಡಾಧಿಕಾರಿಗಳು ಗಮನಹರಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net