ಸಮಗ್ರ ವಿಶ್ವವಿದ್ಯಾಲಯಗಳು ಮರುಸ್ಥಾಪಸಿ

Comprehensive universities restores
ಎಚ್.ಆರ್.ನಿರಾಣಿ.
Published on

ಬೀಳಗಿ: ಕಳೆದ 16ನೇ ವಿಧಾನಸಭಾ ಅಧಿವೇಶನ ಮತ್ತು 155ನೇ ವಿಧಾನ ಪರಿಷತ್ ಅಧಿವೇಶನದ ವಿಧೇಯಕ ಸಂಖ್ಯೆ 19 ರಲ್ಲಿ ರಾಜ್ಯದಲ್ಲಿ ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಅರಣ್ಯ ಕಾಲೇಜುಗಳು ಮರುಸ್ಥಾಪನೆಗೆ ಅನುಮೋದಿಸಲಾಗಿತ್ತು. ಆದರ ಕಾರ್ಯಗಳು ವಿಳಂಬಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ ವಿಶ್ವ ವಿದ್ಯಾಲಯಗಳು ಮರು ಸ್ಥಾಪನೆಗೆಯಾಗಬೇಕೆಂದು ಸರ್ಕಾರಕ್ಕೆ ವಿಧಾನ ಪರಿಷತ್ ಶಾಸಕಎಚ್.ಆರ್.ನಿರಾಣಿ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಗೆ ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರಕ್ಕೆ ಈ ಬಗ್ಗೆ ಪುನರುಚ್ಚರಿಸಿದ್ದಾರೆ. ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಕಳೆದ ಅಧಿವೇಶನದಲ್ಲಿ ಅನುಮೋದನೆಗೊಂಡ ಕರ್ನಾಟಕ ರಾಜ್ಯದ ಸಮಗ್ರ ವಿಶ್ವ ವಿದ್ಯಾಲಯಗಳು ಬೇಗನೆ ನಿರ್ಮಾಣ ಮಾಡಲಿ. ಜತೆಗೆ ಉತ್ತರ ಕರ್ನಾಟಕದ ರೈತ ಸಂಘಟನೆಗಳ ಹಾಗೂ ಜನಪ್ರತಿನಿಧಿಗಳ ತೀವ್ರ ಹೋರಾಟದ ಪರಿಣಾಮವಾಗಿ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಹಾಗೂ ಅರಣ್ಯ ಕಾಲೇಜುಗಳು ಮರು ಸಂಘಟನೆಯಾಗಬೇಕಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net