ಸರ್ವಾಂಗೀಣ ಏಳಿಗೆಗೆ ಬದ್ಧ

16SAVADATTI1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ಸವದತ್ತಿ: ಸಾರ್ವಜನಿಕರ ಹಿತದಷ್ಟಿಗಾಗಿ ಒಳಚರಂಡಿ ಕಾಮಗಾರಿಗೆ ಮೊದಲ ಆದ್ಯತೆ ನೀಡಿದ್ದು, ಸದ್ಯದಲ್ಲೇ ವಿವಿಧ ಕಾಮಗಾರಿ ಪ್ರಾರಂಭವಾಗಲಿವೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಇಲ್ಲಿನ ರಾಮಾಪುರ ಸೆಟ್​ನಲ್ಲಿ ಯಲ್ಲಮ್ಮ ಪುರಸಭೆಯಿಂದ 2023&2024ನೇ ಸಾಲಿನ ಎಸ್​ಎ್​ಸಿ ವಿಶೇಷ ಅನುದಾನದಲ್ಲಿ ಪಟ್ಟಣದ ವಿವಿಧೆಡೆ 3.50 ಕೋಟಿ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 124 ಕೋಟಿ ರೂ. ಮೊತ್ತದ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು, ಮೊದಲನೇ ಹಂತದಲ್ಲಿ 41 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರ್​ ಕೂಡ ಆಗಿದೆ. ಮೊದಲಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿ ನಂತರ ರಸ್ತೆ ಸುಧಾರಣೆ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ೇತ್ರದಲ್ಲಿನ ಸಮಸ್ಯೆಗಳ ಅರಿವಿದೆ. ಹಂತ ಹಂತವಾಗಿ ಬಗೆಹರಿಸುವ ಮೂಲಕ ೇತ್ರದ ಅಭಿವದ್ಧಿಗೆ ಶ್ರಮಿಸುತ್ತೇನೆ. ಶಾಸಕನಾಗಿ ಆಯ್ಕೆಯಾದ ನಂತರ 6 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿಯಿಂದ ಹಿರೇಉಳ್ಳಿಗೇರಿವರೆಗೆ ರಸ್ತೆ ಮರುಡಾಂಬರೀಕರಣ, ಸವದತ್ತಿ&ಮುನವಳ್ಳಿ ರಸ್ತೆ ಅಭಿವದ್ಧಿಗೆ 19 ಕೋಟಿ ರೂ., ಕರೀಕಟ್ಟಿ ವತ್ತದಿಂದ ಭಗೀರಥ ವತ್ತದವರೆಗೆ ಸಿಸಿ ರಸ್ತೆಗೆ 5 ಕೋಟಿ ರೂ., ಸುಮಾರು 2.5 ಕೋಟಿ ರೂ. ವೆಚ್ಚದ ಕ್ರೀಡಾಂಗಣ ಅಭಿವದ್ಧಿ, 1 ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವದ್ಧಿ, ಅರಬಾವಿ & ಚಳ್ಳಿಕೇರಿ ರಸ್ತೆ ಕಾಮಗಾರಿಗೆ 7 ಕೋಟಿ ರೂ., 3 ಕೋಟಿ ರೂ. ವೆಚ್ಚದಲ್ಲಿ ಪಟ್ಟಣ ಸೌಂದಯೀರ್ಕರಣಕ್ಕಾಗಿ ಎಪಿಎಂಸಿಯಿಂದ ಭಗೀರಥ ವತ್ತದ ವರೆಗೂ ಅಲಂಕಾರಿಕ ದೀಪಗಳ ಅಳವಡಿಕೆ ಮಾಡಲಾಗುತ್ತಿದೆ. ಇನ್ನೂ ಸಾಕಷ್ಟು ಯೋಜನೆಗಳ ಮೂಲಕ ೇತ್ರದ ಸಮಗ್ರ ಅಭಿವದ್ಧಿಗೆ ಶ್ರಮಿಸಲಾಗುವುದು. ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.

ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪುರಸಭೆ ಅಧ್ಯೆ ಚಿನ್ನವ್ವ ಹುಚ್ಚಣ್ಣವರ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಪುರಸಭೆ ಮಾಜಿ ಅಧ್ಯ ಶಿವಾನಂದ ಪಟ್ಟಣಶೆಟ್ಟಿ, ನೌಕರರ ಸಂದ ಅಧ್ಯ ಅಶೋಕ ಮುರಗೋಡ, ಸ್ಥಾಯಿ ಸಮಿತಿ ಅಧ್ಯೆ ಆಶಾ ಮುನವಳ್ಳಿ, ಮಂಜುನಾಥ ಪಾಚಂಗಿ, ಪುರಸಭೆ ಸದಸ್ಯ ಶಿವಾನಂದ ಹೂಗಾರ, ದೀಪಕ ಜಾನ್ವೆಕರ, ಗುತ್ತಿಗೆದಾರ ಶ್ರೀನಾಥ ಬೈರುಗೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net