ರಾಮ್ಕೊ ಸಿಮೆಂಟ್​ಗೆ ಸಮಗ್ರ ಸಮೃದ್ಧಿ ಪ್ರಶಸ್ತಿ

St 2
Published on

ಬೆಂಗಳೂರು: ಎಕಾನಮಿಕ್ ಟೈಮ್್ಸ ಪತ್ರಿಕೆ ವತಿಯಿಂದ ಕಾಪೋರೇಟ್ ಸಾಮಾಜಿಕ ಚಟುವಟಿಕೆಗಳಿಗಾಗಿ ನೀಡುವ ‘ಸಮಗ್ರ ಸಮೃದ್ಧಿ ಅಭಿವೃದ್ಧಿ’ ಪ್ರಶಸ್ತಿಗೆ ಈ ಬಾರಿ ರಾಮ್ಕೊ ಸಿಮೆಂಟ್ ಲಿಮಿಟೆಡ್ ಭಾಜನವಾಗಿದೆ. ಫೆ.18ರಂದು ಮುಂಬೈನಲ್ಲಿ ನಡೆದ ಸಿಎಸ್​ಆರ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿಸಿದರು.

ರಾಮ್ಕೊ ಸಿಮೆಂಟ್ ಲಿಮಿಟೆಡ್​ನ ಅಲಥಿಯೂರ್ ಘಟಕ ವಿವಿಧ ಸಮುದಾಯಗಳ ಉನ್ನತಿಗಾಗಿ ಕೆಲಸ ಮಾಡುತ್ತಿದೆ. ರೋಗ ನಿರೋಧಕ ಆರೋಗ್ಯ ರಕ್ಷಣೆಯ ಮೂಲಕ ಆರೋಗ್ಯ, ನೈರ್ಮಲ್ಯ ಸೇರಿ ಮತ್ತಿತರರ ಸೇವೆಗಳನ್ನು ಕೈಗೊಂಡಿದೆ. ಅನಾರೋಗ್ಯ ಮತ್ತು ಪ್ರಾಥಮಿಕ ಹಂತದಲ್ಲಿ ರೋಗಗಳನ್ನು ಪತ್ತೆ ಮಾಡಲು ಸಮುದಾಯ ಆರೋಗ್ಯ ಶಿಬಿರ, ಶುದ್ಧನೀರಿನ ಘಟಕ, ಶೌಚಗೃಹ, ಬಯಲು ಬರ್ಹಿದಸೆ ನಿಮೂಲನೆಗೆ ಸ್ಮಾರ್ಟ್ ಶೌಚಗೃಹ ಸ್ಥಾಪಿಸಿದೆ. ಅಲ್ಲದೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿವಿಧ ವಿಷಯಗಳ ಬೋಧನೆ ಮಾಡಲು ಹೆಚ್ಚುವರಿ ಶಿಕ್ಷಕರನ್ನು ಒದಗಿಸುವುದು, ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ, ಪ್ರತಿ ವರ್ಷ ಒಂದು ಸಾವಿರ ಮಕ್ಕಳನ್ನು ಶಾಲೆಗೆ ಬರುವಂತೆ ಪ್ರೋತ್ಸಾಹಿಸಲು ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದೆ. ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ನಗದು ನೀಡುತ್ತಿದೆ. ಮಹಿಳಾ ಸಬಲೀಕರಣ ಹಾಗೂ ರೈತರ ಅಭ್ಯುದಯಕ್ಕೆ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದನ್ನು ಪರಿಗಣಿಸಿ ರಾಮ್ಕೊ ಸಿಮೆಂಟ್ ಲಿಮಿಟೆಡ್​ಗೆ ಪ್ರತಿಷ್ಠಿತ ಲಭಿಸಿದೆ.

ಅಂತಾರಾಷ್ಟ್ರೀಯ ಸಂಸ್ಥೆಗಳು ಸೇರಿ 120ಕ್ಕೂ ಹೆಚ್ಚು ಎನ್​ಜಿಒ ಸಂಸ್ಥೆಗಳು ಭಾಗವಹಿಸಿದ್ದವು. 30 ಕಂಪನಿಗಳು ಹಾಗೂ 20 ಎನ್​ಜಿಒಗಳು ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಶಸ್ತಿ ಮತ್ತು ಪ್ರಮಾಣಪತ್ರಗಳನ್ನು ಪಡೆದಿವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net