ಈ ಕ್ಲಿನಿಕ್ ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಗಾಗಿ ಹಲವು ವೈದ್ಯಕೀಯ ವಿಭಾಗಗಳನ್ನು ಒಂದೇ ಸೂರಿನಡಿ ತರಲಿದೆ. ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗ, ಫ್ಯಾಟಿ ಲಿವರ್, ನಿದ್ರಾಹೀನತೆ, ಕೀಲು ನೋವು ಮತ್ತಿತರ ದೀರ್ಘಕಾಲದ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ಲಿನಿಕ್ ಅತ್ಯಂತ ಪರಿಣಾಮಕಾರಿಯಾಗಲಿದೆ. ವಿವಿಧ ವಿಭಾಗಗಳ ತಜ್ಞರನ್ನು ಒಳಗೊಂಡಂತಹ ತಂಡದ ಮೂಲಕ ಸಂಪೂರ್ಣ ತಪಾಸಣೆ ಮತ್ತು ಚಿಕಿತ್ಸಾ ಯೋಜನೆಯನ್ನು ಒದಗಿಸಲಾಗುತ್ತದೆ.