ಸಮಗ್ರ ನೀರಾವರಿಗೆ ಪ್ರಥಮಾದ್ಯತೆ

6
ಹುಲ್ಲೋಳಿ ಹಟ್ಟಿ ಗ್ರಾಮದ ಕೆರೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಬಾಗಿನ ಅರ್ಪಿಸಿದರು. ಸತ್ಯಪ್ಪ ನಾಯಿಕ, ಶೀತಲ ಬ್ಯಾಳಿ, ಕಾಡಪ್ಪ ಕುಗಟೋಳಿ, ಈರಗೌಡ ಪಾಟೀಲ, ರಾಮಪ್ಪ ಹುದ್ದಾರ ಇತರರಿದ್ದರು.
Published on

ಹುಕ್ಕೇರಿ: ತಾಲೂಕಿನ 19 ಕೆರೆಗಳಿಗೆ ಡಿಸೆಂಬರ್ ಒಳಗಾಗಿ ನೀರು ತುಂಬಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಈ ಮೂಲಕ ತಾಲೂಕಿನ ಶೇ.90 ಭೂಮಿ ನೀರಾವರಿ ಆಗಲಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿದಲ್ಲಿ 12 ತಿಂಗಳು ನೀರಾವರಿ ಜತೆಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭಿಸಲಾಗಿದೆ.

ಜಲಮೂಲಗಳಾದ ಕೆರೆ-ಕಟ್ಟೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಕೆರೆ ಉಸ್ತುವಾರಿ ಸಮಿತಿ ರಚಿಸಿಕೊಂಡು ಸ್ಥಳೀಯ ಗ್ರಾಮಾಡಳಿತದಿಂದ ನರೇಗಾ ಯೋಜನೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಮುಖಂಡರಾದ ಸತ್ಯಪ್ಪ ನಾಯಿಕ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ, ಕಾಡಪ್ಪ ಕುಗಟೋಳಿ, ಈರಗೌಡ ಪಾಟೀಲ, ರಾಮಪ್ಪ ಹುದ್ದಾರ, ಬಿ.ಎಸ್.ಪಾಟಿಲ, ಚಿಕ್ಕಪ್ಪ ರಜಪೂತ, ಅನ್ನಪ್ಪ ಮಾಳಗಿ, ಸುರೇಶ ಗುರವ, ಬಾಳಯ್ಯ ಮಠದ, ಸಿದ್ಧಪ್ಪ ಪೂಜೇರಿ, ಬಿ.ಎಸ್.ಪಾಟೀಲ, ಹುಲ್ಲೋಳಿ ಗ್ರಾಪಂ ಅಧ್ಯಕ್ಷ ಕಲ್ಮೇಶ ಅಮ್ಮಣಗಿ, ಜಿನ್ನಪ್ಪ ಸಪ್ತಸಾಗರ, ಬಿ.ಬಿ.ಚೌಗಲಾ, ನೀರಾವರಿ ಇಲಾಖೆ ಅಧಿಕಾರಿಗಳಾದ ಸಂಜಯ ಮಾಳಗಿ, ಶಾಧಿಕ್ ಮುಲ್ಲಾ, ಸುಭಾಷ ಮಹಿಮಗೋಳ, ಚಂದ್ರಶೇಖರ ಪೂಜೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net