ಸಮಗ್ರ ಕೃಷಿಯಿಂದ ಲಾಭ ಹೆಚ್ಚಳ

24 SANDOOR 03
ಸಂಡೂರು ತಾಲೂಕಿನ ಭುಜಂಗನಗರದ ರೈತ ಕೆರೆನಳ್ಳಿ ಬಸಪ್ಪ ಅವರ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಜಲಾನಯನ ಕಾರ್ಯಕ್ರಮ ಹಾಗೂ ರೈತ ದಿನಾಚರಣೆ ಉದ್ದೇಶಿಸಿ ರೈತ ಕೆರೆನಳ್ಳಿ ಬಸಪ್ಪರೊಂದಿಗೆ ವಿಜ್ಞಾನಿ ಡಾ.ರವಿ ಸಂವಾದ ನಡೆಸಿದರು. ಜೆಎಸ್‌ಡಬ್ಲ್ಯು ಫೌಂಡೇಷನ್ ಕೃಷಿ ವಿಭಾಗದ ಸಂಯೋಜಕ ನಾಗನಗೌಡ, ಇಕೋವಾ ಸಂಸ್ಥೆಯ ಗಂಗಾಧರ, ಕೃಷಿ ವಿಜ್ಞಾನ ಕೇಂದ್ರದ ಗಣೇಶ ಇತರರಿದ್ದರು.
Published on

ಸಂಡೂರು: ಸಮಗ್ರ ಕೃಷಿಯಿಂದ ಬದುಕು ಕಟ್ಟಿಕೊಂಡ ಬಸಪ್ಪ ಇತರೆ ರೈತರಿಗೆ ಮಾದರಿಯಾಗಿದ್ದಾರೆ ಎಂದು ಜೆಎಸ್‌ಡಬ್ಲ್ಯು ಫೌಂಡೇಷನ್ ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಶ್ಲಾಘಿಸಿದರು.

ತಾಲೂಕಿನ ಭುಜಂಗನಗರದ ರೈತ ಕೆರೆನಳ್ಳಿ ಬಸಪ್ಪರ ಜಮೀನಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಲಾನಯನ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಮಾತನಾಡಿದರು.

ಬಸಪ್ಪ ಅವರು ಒಂದು ಎಕರೆ ಜಮೀನಿನಲ್ಲಿ ಬಾವಿ ತೋಡಿಸಿ, ಕೃಷಿ ಪ್ರಾರಂಭಿಸಿದ ಅವರು 30 ವರ್ಷಗಳಲ್ಲಿ 9ಎಕರೆ ಜಮೀನು ಖರೀದಿಸಿ ತೆಂಗು, ಅಡಕೆ, ಬಾಳೆ, ಎಲೆ ಒಳಗೊಂಡಂತೆ 23 ವಿವಿಧ ತೋಟಗಾರಿಕೆ ಕೃಷಿಯಲ್ಲಿ ತೊಡಗಿ ಉತ್ತಮ ಆದಾಯ ಗಳಿಸುತ್ತಿರುವುದು ಅನುಕರಣೀಯ. ಅವರ ತೋಟವನ್ನು ಮಾದರಿಯಾಗಿರಿಸಿ ಸಂಡೂರು ಭಾಗದಲ್ಲಿ 50 ರೈತರಿಗೆ ಸಮಗ್ರ ಕೃಷಿ ಮಾಡಲು ಕಾರ್ಯಾರಂಭ ಮಾಡಿದ್ದೇವೆ. ಮುಂದಿನ ಏಪ್ರಿಲ್‌ನಿಂದ ತಾಲೂಕಿನಲ್ಲಿ ಜಲಾನಯನ ಕಾರ್ಯಕ್ರಮ ಮಾಡಲಿದ್ದೇವೆ ರೈತರು ಈ ಕಾರ್ಯಕ್ರಮಗಳ ಅನುಕೂಲ ಪಡೆದುಕೊಳ್ಳಬೇಕು ಎಂದರು.

ರೈತ ದಂಪತಿ ಬಸಪ್ಪ ಮತ್ತು ಸುಭದ್ರಮ್ಮರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net