ಅಲ್ಪಸಂಖ್ಯಾತರ ಕಾಲನಿಗಳ ಸಮಗ್ರ ಅಭಿವೃದ್ಧಿ

07M.D.R.3
ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತ ಕಾಲನಿಯ ಅಭಿವೃದ್ಧಿಗೆ ಶಾಸಕ ಕೆ.ಎಂ.ಉದಯ್ ಗುರುವಾರ ಭೂಮಿಪೂಜೆ ನೆರವೇರಿಸಿದರು. ಶಾಹಿನ್‌ತಾಜ್, ಮುರಳಿಧರ್, ರಮೇಶ್, ಜಾವೀದ್ ಪಾಷ, ಬಾಬು, ಎಂ.ಆರ್.ಕಾಳೇಗೌಡ, ಬಿ.ಆರ್.ಪ್ರಸನ್ನಕುಮಾರ್, ಕಾವ್ಯಾ ರವಿ, ಗೋಪಿ, ಶೇಖರ್, ಧನಂಜಯ ಇತರರಿದ್ದರು.
Published on

ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಕಾಲನಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.

ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಗುರುವಾರ 1 ಕೋಟಿ ರೂ.ವೆಚ್ಚದಲ್ಲಿ ಅಲ್ಪಸಂಖ್ಯಾತ ಕಾಲನಿಯ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನವನ್ನು ತಂದು ಅಲ್ಪಸಂಖ್ಯಾತರ ಕಾಲನಿಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬೆಸಗರಹಳ್ಳಿ ಗ್ರಾಮದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿದ್ದು ಅವರು ವಾಸ ಮಾಡುವ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

ಅಲ್ಪಸಂಖ್ಯಾತ ಕಾಲನಿಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ನಾನು ಶಾಸಕನಾದ ನಂತರ ಜನಸಂಪರ್ಕ ಸಭೆ ಮಾಡಿದಾಗ ಬೆಸಗರಹಳ್ಳಿ ಅಲ್ಪಸಂಖ್ಯಾತ ಕಾಲನಿ ಅಭಿವೃದ್ಧಿಯಿಂದ ಹಿಂದುಳಿದಿರುವ ಬಗ್ಗೆ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದರು. ಆ ಮನವಿಗೆ ಸ್ಪಂದಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಒಂದು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಾದರಿ ಬೆಸಗರಹಳ್ಳಿ ರೂಪಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದರು.

ಇದೇ ವೇಳೆ ಸ್ಥಳೀಯ ಮುಖಂಡರು ಶಾಸಕ ಕೆ.ಎಂ.ಉದಯ್ ಅವರನ್ನು ಸ್ವಾಗತಿಸಿ, ನಂತರ ಅಭಿನಂದಿಸಿದರು. ಗ್ರಾಪಂ ಉಪಾಧ್ಯಕ್ಷೆ ಶಾಹಿನ್‌ತಾಜ್, ಸದಸ್ಯರಾದ ಮುರಳಿಧರ್, ರಮೇಶ್, ಜಾವೀದ್ ಪಾಷ, ಬಾಬು, ಎಂ.ಆರ್.ಕಾಳೇಗೌಡ, ಬಿ.ಆರ್.ಪ್ರಸನ್ನಕುಮಾರ್, ಕಾವ್ಯಾ ರವಿ, ಮುಖಂಡರಾದ ಗೋಪಿ, ಶೇಖರ್, ಧನಂಜಯ, ಅಲ್ಪಸಂಖ್ಯಾತ ಯುವ ಮುಖಂಡರಾದ ಸೈಯದ್ ಲುಕ್ಮಾನ್, ಪೀರ್ ಪಾಷ, ದೇಶಹಳ್ಳಿ ಶಾಬಾಜ್, ಫರಾಜ್ ಪಾಷ, ಸೈಯದ್ ಜಾವೀದ್, ಯೂನಸ್ ಖಾನ್, ಮಹಮ್ಮದ್ ಇಲಿಯಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net