

ಹನಗೋಡು: ಹನಗೋಡು ಹೋಬಳಿ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 14 ವರ್ಷದೊಳಗಿನ ಮಕ್ಕಳ ಕ್ರೀಡಾಕೂಟದಲ್ಲಿ ಹನಗೋಡು ಲಕ್ಷ್ಮಣತೀರ್ಥ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ಪಡೆದರು.
ಬಾಲಕಿಯರ ವಿಭಾಗದಲ್ಲಿ 100 ಮೀ., 200 ಮೀ. ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದ ಪೃಥ್ವಿಕ್‌ಗೌಡ ವೈಯಕ್ತಿಕ ಚಾಂಪಿಯನ್ ಆದರೆ, 4*100 ಮೀ. ರಿಲೇ (ಪೃಥ್ವಿಕ್‌ಗೌಡ, ಬಿಂದುಶ್ರೀ, ಆರ್.ನಿಖಿತಾ, ಪ್ರತಿಕ್ಷಾ) ತಂಡ ಪ್ರಥಮ,
400 ಮೀ. ಓಟದಲ್ಲಿ ಬಿಂದುಶ್ರೀ ದ್ವಿತೀಯ, ಖೋ-ಖೋ ಪ್ರಥಮ, ಕಬಡ್ಡಿ ದ್ವಿತೀಯ ಸ್ಥಾನ ಪಡೆದರು.
ಬಾಲಕರ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ಶ್ರೀಧರ್(ಪ್ರ), 200 ಮೀ. ಓಟ ವಿನೋದ್‌ಗೌಡ (ದ್ವಿ), 400 ಮೀ. ಓಟ ನಮ್ರತ್‌ಗೌಡ (ತೃ), ಕಬಡ್ಡಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶಾಲೆಯ ಕ್ರೀಡಾಪಟುಗಳನ್ನು ಸಂಸ್ಥೆಯ ಮುಖ್ಯಸ್ಥ ನಟರಾಜ್, ಮುಖ್ಯಶಿಕ್ಷಕಿ ಪರ್ವಿನ್ ತಾಜ್, ದೈಹಿಕ ಶಿಕ್ಷಣ ಶಿಕ್ಷಕ ಸಂಜಯ್ ಹಾಗೂ ಶಿಕ್ಷಕರು ಅಭಿನಂದಿಸಿದರು.