ಅರೇಹಳ್ಳಿ ಅನುಗ್ರಹ ಶಾಲೆಗೆ ಸಮಗ್ರ ಪ್ರಶಸ್ತಿ

30blrp1
ಕಲೋತ್ಸವ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಬೇಲೂರು ತಾಲೂಕಿನ ಅರೇಹಳ್ಳಿ ಅನುಗ್ರಹ ಪ್ರೌಢಶಾಲಾ ವಿದ್ಯಾರ್ಥಿಗಳು.
Published on

ಬೇಲೂರು: ತಾಲೂಕಿನ ಅರೇಹಳ್ಳಿಯ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ಅರೇಹಳ್ಳಿ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಜಾನಪದ ನೃತ್ಯ 6, ಕ್ವಿಜ್ 2, ಕವ್ವಾಲಿ 6 ವಿದ್ಯಾರ್ಥಿಗಳು ಸೇರಿದಂತೆ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು 27 ಪ್ರಶಸ್ತಿಗಳನ್ನು ವಿದ್ಯಾರ್ಥಿಗಳು ಪಡೆಯುವುದರೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತರನ್ನು ಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್, ಮುಖ್ಯ ಶಿಕ್ಷಕ ಕೆ.ಎಸ್.ರಂಜಿತ್ ಕುಮಾರ್, ಶಿಕ್ಷಕರಾದ ಸುಮಿತಾ ಕೀರ್ತಿ, ನಿರ್ಮಲಾ, ಚಂದ್ರು, ಜ್ಯೋತಿ, ಗ್ರೇಷಿಯನ್ ಮೆನೆಜಸ್, ಸಂಗೀತ ಶಿಕ್ಷಕಿ ಗೌರಿ ಹೆಗಡೆ ಅಭಿನಂದಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ವಿವರ: ಎಸ್.ಆರ್.ಚೈತನ್ಯ ಮತ್ತು ತಂಡ, ಜಾನಪದ ನೃತ್ಯ(ಪ್ರ), ಪ್ಲೆವಿನ್-ಮಿಮಿಕ್ರಿ(ಪ್ರ), ಪೆಲ್ಸ್‌ಟನ್-ಆಶು ಭಾಷಣ(ಪ್ರ), ಮೊಹಮ್ಮದ್ ಬಿಲಾಲ್-ಅರೇಬಿಕ್ ಧಾರ್ಮಿಕ ಪಠಣ(ಪ್ರ), ದುಂಬಿನಿ-ಭಗವದ್ಗೀತೆ ಧಾರ್ಮಿಕ ಪಠಣ(ದ್ವಿ), ಅಫ್ಸಾನಾ ಬಾನು-ಕನ್ನಡ ಪ್ರಬಂಧ(ದ್ವಿ), ಆಯೇಷಾ ಸಿದ್ಧಿಕಾ-ಹಿಂದಿ ಭಾಷಣ(ದ್ವಿ), ಯಶಸ್ವಿನಿ ಹಾಗೂ ಪೆಲ್ಸ್‌ಟನ್-ಕ್ವಿಜ್(ದ್ವಿ), ಆದಿತ್ಯ-ಚಿತ್ರಕಲೆ(ದ್ವಿ), ಪೆಲ್ಸ್‌ಟನ್-ಚರ್ಚಾ ಸ್ಪರ್ಧೆ(ದ್ವಿ), ಜಾಯ್ಸಟನ್-ಜಾನಪದ ಗೀತೆ(ದ್ವಿ), ಫಿದಾ ಮತ್ತು ತಂಡ- ಕವ್ವಾಲಿ(ತೃ), ಭವ್ಯಾ-ಭಾವಗೀತೆ(ತೃ), ಜ್ಞಾನೇಶ್-ಕವನ ವಾಚನ(ತೃ), ಯಶಸ್ವಿನಿ-ಭರತನಾಟ್ಯ(ತೃ), ಸಿಯೋನ್ ಜೈಸನ್ ಡಿ ಕುನ್ಹಾ-ಇಂಗ್ಲಿಷ್ ಭಾಷಣ(ತೃ) ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net