ಪ್ರತಿಭಾ ಕಾರಂಜಿಯಲ್ಲಿ ವಾಜಪೇಯಿ ಶಾಲೆಗೆ ಸಮಗ್ರ ಪ್ರಶಸ್ತಿ

Comprehensive Award for Vajpayee School at Pratibha Kanji
Published on

ಭಾಗಮಂಡಲ:

ಕ್ಲಸ್ಟರ್ ಮಟ್ಟದ 2024-2025ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಭಾಗಮಂಡಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಈ ಸಾಧನೆ ಮಾಡಿದ್ದಾರೆ. ಪ್ರೌಢಶಾಲಾ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶೃತಿ ಕೆ.ಎಂ. ಪ್ರಥಮ, ಇಂಗ್ಲೀಷ್ ಭಾಷಣದಲ್ಲಿ ವಿಶ್ಮಿತಾ ಎಸ್. ಎಸ್. ಪ್ರಥಮ, ಹಿಂದಿ ಭಾಷಣದಲ್ಲಿ ನಿಶ್ಚಿತಾ ಸಿ.ಎಸ್. ಪ್ರಥಮ, ಚರ್ಚಾ ಸ್ಪರ್ಧೆಯಲ್ಲಿ ಸಾವಿತ್ರಿ ಸಿ. ಎಸ್. ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ವಿನುಷಾ ಕೆ.ಜೆ. ಪ್ರಥಮ, ಆಶುಭಾಷಣದಲ್ಲಿ ಎಂ. ಚಂದ್ರಶೇಖರ್ ಪಟೇಲ್ ಪ್ರಥಮ, ರಸಪ್ರಶ್ನೆಯಲ್ಲಿ ರೋಶನ್ ಕೆ. ಎಸ್. ಮತ್ತು ಧನ್ವಿತ್ ಪ್ರಥಮ, ಜನಪದ ಗೀತೆ, ಭಾವಗೀತೆಯಲ್ಲಿ ಬಾಂಧÀವ್ಯ ಬಿ.ಡಿ. ದ್ವಿತೀಯ, ರಂಗೋಲಿಯಲ್ಲಿ ಸೌಮ್ಯಾ ದ್ವಿತೀಯ, ಮಿಮಿಕ್ರಿಯಲ್ಲಿ ಧಿಲನ್ ದ್ವಿತೀಯ, ಕವನ ವಾಚನದಲ್ಲಿ ಸುಷ್ಮಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆ ನಯನ ಪ್ರಥಮ, ಚಿತ್ರಕಲೆ ವರ್ಷಿಕಾ ಪ್ರಥಮ, ಕಥೆ ಹೇಳುವುದು ಕೃತಿಕಾ ತೃತೀಯ, ಕ್ಲೇ ಮಾಡೆಲಿಂಗ್ ಸೃಜನ್ ದ್ವಿತೀಯ, ಆಶುಭಾಷಣ ಘನ್ಯ ದ್ವಿತೀಯ, ಮಿಮಿಕ್ರಿ ಚರಿಷ್ಮಾ ತೃತೀಯ ಸ್ಥಾನ ಪಡೆಯುವ ಮುಖಾಂತರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net