

ಚನ್ನರಾಯಪಟ್ಟಣ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 2024-25ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪಟ್ಟಣದ ನವೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೇಟಿಕ್ಸ್ ವಿಭಾಗ, ಗುಂಪು ಆಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವ ಮೂಲಕ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೈಕಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭರ್ಜಿ ಎಸೆತದಲ್ಲಿ ಶಶಾಂಕ್ ಪ್ರಥಮ, 100 ಮೀ. ಓಟದಲ್ಲಿ ಶೇಷಗಿರಿ ಪ್ರಥಮ, 200 ಮೀ. ಓಟದಲ್ಲಿ ಶೇಷಗಿರಿ ದ್ವಿತೀಯ ಸ್ಥಾನ, 400 ಮೀ. ಓಟ, ಬಿ.ಎಸ್.ಚಂದು ತೃತೀಯ ಸ್ಥಾನ ಗಳಿಸಿದ್ದಾರೆ. ಎತ್ತರ ಜಿಗಿತದಲ್ಲಿ ಎಸ್.ವಿನೋದ್ ತೃತೀಯ, ಉದ್ದ ಜಿಗಿತದಲ್ಲಿ ಮಾದೇಶ ತೃತೀಯ ಸ್ಥಾನ, ಹ್ಯಾಮರ್‌ನಲ್ಲಿ ತರಣ್‌ಗೌಡ ತೃತೀಯ ಸ್ಥಾನಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 800 ಮೀ. ಓಟ ಮತ್ತು 1500 ಮೀ. ಓಟದಲ್ಲಿ ತನುಶ್ರೀ ಪ್ರಥಮ ಸ್ಥಾನಗಳಿಸಿದ್ದು, ತ್ರಿವಿಧ ಜಿಗಿತದಲ್ಲಿ ಕೆ.ಟಿ.ಪ್ರಕೃತಿ ತೃತೀಯ ಸ್ಥಾನವನ್ನು, ಉದ್ದ ಜಿಗಿತದಲ್ಲಿ ಎಂ.ಭೂಮಿಕಾ ತೃತೀಯ ಸ್ಥಾನಗಳಿಸಿದ್ದಾರೆ.
ಗುಂಪು ಆಟಗಳಲ್ಲಿ 4400 ರಿಲೇ ಓಟದಲ್ಲಿ ತನುಶ್ರೀ ಮತ್ತು ತಂಡ ಪ್ರಥಮ ಸ್ಥಾನ, 4400 ರಿಲೇಯಲ್ಲಿ ಶೇಷಗಿರಿ ಮತ್ತು ತಂಡ ದ್ವಿತೀಯ ಸ್ಥಾನ, ವಾಲಿಬಾಲ್‌ನಲ್ಲಿ ವೆಂಕಟೇಶ್ ಮತ್ತು ತಂಡ, ಟೆನಿಕಾಯ್ಸನಲ್ಲಿ ಲಕ್ಷ್ಮೀ ಮತ್ತು ನಿಮಿತಾ ಪ್ರಥಮ, ಮಹಮ್ಮದ್ ಆಯಾನ್ ಮತ್ತು ಮಹಮ್ಮದ್ ಸಾದ್ ಪ್ರಥಮ ಸ್ಥಾನಗಳಿಸಿದ್ದಾರೆ. ವೈಯಕ್ತೀಕ ಚಾಂಪಿಯನ್‌ಶಿಪ್ ಆಗಿ ತನುಶ್ರೀ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನಿಂದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ 8 ಚಿನ್ನ, 2 ಬೆಳ್ಳಿ, ಮತ್ತು 6 ಕಂಚು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಒ.ಆರ್.ರಂಗೇಗೌಡ, ಕಾರ್ಯದರ್ಶಿ ಶರತ್ ಕೆಂಬಾಳು, ನಿರ್ದೇಶಕರಾದ ಗೋವಿಂದ್‌ರಾಜ್, ಆನಂದ್ ಕಾಳೇನಹಳ್ಳಿ, ಶಿವಕುಮಾರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಮತ್ತು ಸಿಬ್ಬಂದಿ ಅಭಿನಂಧನೆ ಸಲ್ಲಿಸಿದ್ದಾರೆ.