ಮೂಡಿಗೆರೆಯ ಕರಾಟೆ ಅಕಾಡೆಮಿಗೆ ಸಮಗ್ರ ಪ್ರಶಸ್ತಿ

30-MDG-1P1
Published on

ಮೂಡಿಗೆರೆ: ಕೇರಳದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆಯ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡಿಷನಲ್ ಕರಾಟೆ ಸಂಸ್ಥೆಗೆ 12 ಚಿನ್ನ, 14 ಬೆಳ್ಳಿ ಹಾಗೂ 17 ಕಂಚಿನ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದೆ.

ಕೇರಳದಲ್ಲಿ ಶೋಟೋಕಾನ್ ಅಕಾಡೆಮಿ ಆಫ್ ಇಂಡಿಯಾ ಸಂಸ್ಥೆ ಭಾನುವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ರಾಜ್ಯದಿಂದ 1,600 ಮಂದಿ ಕರಾಟೆಪಟುಗಳು ಭಾಗವಹಿಸಿ 52 ವಿವಿಧ ಶೈಲಿಯ ಕರಾಟೆ ಪ್ರದರ್ಶಿಸಿದರು. ಮೂಡಿಗೆರೆಯಿಂದ 43 ಮಂದಿ ಬ್ಲಾಕ್ ಬೆಲ್ಟ್ ಡಾನ್‌ಗಳು ಭಾಗವಹಿಸಿದ್ದರು. ಇವರಿಗೆ ಕರಾಟೆ ಅಕಾಡೆಮಿ ಮುಖ್ಯಶಿಕ್ಷಕ ಸೆನ್‌ಸಾಯ್ ರಾಜೇಂದ್ರನ್, ಬೇಬಿ ಲತಾ, ಪೂಜಿತ್,ಅಶ್ವಿನಿ ಚಂದ್ರ ತರಬೇತಿ ನೀಡಿದ್ದಾರೆ.

ಮುಖ್ಯಶಿಕ್ಷಕ ಸೆನ್‌ಸಾಯ್ ರಾಜೇಂದ್ರನ್‌ಮಾತನಾಡಿ, ನಮ್ಮ ಸಂಸ್ಥೆಯಿಂದ ಕೇರಳಕ್ಕೆ ತೆರಳಿದ್ದ ಎಲ್ಲರೂ ಪದಕ ಪಡೆದಿದ್ದರೆ. ಇದು ಕರ್ನಾಟಕಕ್ಕೆ ಹೆಮ್ಮೆ ತಂದಿದೆ. ನಮ್ಮ ಸಂಸ್ಥೆ ಮೂಡಿಗೆರೆ, ಸಕಲೇಶಪುರ ಮತ್ತು ಹಾನುಬಾಳು ಈ ಮೂರು ಕಡೆ ತರಬೇತಿ ನಡೆಸುತ್ತಿದ್ದು 700 ಮಂದಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. 30 ವರ್ಷದ ಹಿಂದೆ ನಮ್ಮ ಸಂಸ್ಥೆ ಸ್ಥಾಪನೆಯಾಗಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ಸಂಸ್ಥೆಯಿಂದ ಬಾಕ್ ಬೆಲ್ಟ್ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net