ಲಿಂಗದಹಳ್ಳಿ ಸರ್ಕಾರಿ ಶಾಲೆಗೆ ಸಮಗ್ರ ಪ್ರಶಸ್ತಿ

l spo
ಬಳ್ಳಾವಾರದಲ್ಲಿ ನಡೆದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಕೂಟದಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಶಿಕ್ಷಕರು ಇದ್ದರು.
Published on

ಲಿಂಗದಹಳ್ಳಿ: ಬಳ್ಳಾವಾರದಲ್ಲಿ ನಡೆದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಲಿಂಗಹದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಬಾಲಕರ ವಿಭಾಗದಲ್ಲಿ ಮಂಜುನಾಥ, 200 ಮೀಟರ್ ಓಟ, ಎತ್ತರ ಜಿಗಿತ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ, 4*100 ಮೀ.ರಿಲೇಯಲ್ಲಿ ಆದರ್ಶ, ಸುಮನ್, ಪ್ರಜ್ವಲ್ ತಂಡ (ಪ್ರ), ಚಕ್ರ ಎಸೆತದಲ್ಲಿ ರಾಹುಲ್ (ಪ್ರ), ಗುಂಡು ಎಸೆತದಲ್ಲಿ ಪ್ರೀತಮ್ (ಪ್ರ), ವಾಲಿಬಾಲ್(ಪ್ರ), ತ್ರೋಬಾಲ್(ಪ್ರ), ಕಬಡ್ಡಿ (ದ್ವಿ), ಕೋ ಕೋ (ದ್ವಿ) ಗಳಿಸಿದೆ.
ಬಾಲಕಿಯರ ವಿಭಾಗದಲ್ಲಿ ಭೂಮಿಕಾ 100 ಮೀ. ಓಟದಲ್ಲಿ (ಪ್ರ), ಗುಂಡು ಎಸೆತ, ಚಕ್ರ ಎಸೆತದಲ್ಲಿ ಪ್ರಗತಿ (ಪ್ರ), ಚಕ್ರ ಎಸೆತದಲ್ಲಿ ನಮ್ರತಾ (ದ್ವಿ) ಸ್ಥಾನ ಗಳಿಸಿದ್ದಾರೆ.
ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶಪ್ಪ, ಸದಸ್ಯರಾದ ನಾಗೇಶಪ್ಪ, ಸ್ವಾಮಿ, ರುದ್ರನಾಯ್ಕ, ಗಂಗಾಧರ್, ಶೀಲಾ, ಶೋಭಾ, ಮೀನಾ, ಅನಿತಾ, ದಾನಿಗಳಾದ ಗಾಯತ್ರಿ, ರಘುನಂದನ್, ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಣೆ ಮಾಡಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net