ಸುಪ್ರಜ ಶಾಲೆಯ ಕರಾಟೆ ಪಟುಗಳಿಗೆ ಸಮಗ್ರ ಪ್ರಶಸ್ತಿ

31ss1students prasasti
Published on

ಮಡಿಕೇರಿ: ಶನಿವಾರಸಂತೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯಿಂದ ಇತ್ತೀಚೆಗೆ ನಡೆದ 7ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಕರಾಟೆ ಪಟುಗಳು ಭಾಗವಹಿಸಿ ಕಟಾ ಮತ್ತು ಕುಮಿತ್ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಿರಿಯ ಕರಾಟೆ ಶಿಕ್ಷಕ ಅರುಣ್ ವಿದ್ಯಾರ್ಥಿಗಳಿಗೆ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ.ಸುಜಲಾದೇವಿ, ಮುಖ್ಯಶಿಕ್ಷಕಿ ಎಚ್.ಕೆ.ಕೆಂಚಮ್ಮ, ಹಿರಿಯ ಶಿಕ್ಷಕ ಯೋಗೇಶ್ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net