

ಸೊರಬ: ಶ್ರೀ ರೇಣುಕಾಂಬ ಪ್ರೌಢಶಾಲಾ ಆವರಣದಲ್ಲಿ ಪ್ರಸಕ್ತ ಸಾಲಿನ ಕಸಬಾ ಬಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ಕಡಸೂರು ಸರ್ಕಾರಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಬಾಲಕರ ವಿಭಾಗದ 3000 ಮೀ. ಓಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, 1,500 ಮೀ. ಓಟದಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ, 800 ಮೀ. ಓಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ, 400 ಮೀ. ಓಟದಲ್ಲಿ ತೃತೀಯ ಸ್ಥಾನ ಹಾಗೂ ವಾಲಿಬಾಲ್, 4100 ಮೀ. ರೀಲೆ, 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ, 110 ಮೀ. ಹರ್ಡಲ್ಸ್, ತ್ರಿವಿಧ ಜಿಗಿತ, ಬಾಲ್‌ಬ್ಯಾಡ್ಮಿಂಟನ್, 5,000 ಮೀ. ನಡಿಗೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಬಾಲಕಿಯ ವಿಭಾಗದ 3,000 ಮೀ. ಓಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ, 100 ಮೀ., 200 ಮೀ., 800 ಮೀ. ಹಾಗೂ 1,500 ಮೀ. ಓಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, ಉದ್ದಜಿಗಿತ ಮತ್ತು 400 ಮೀ. ಓಟದಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ, 300 ಮೀ. ನಡಿಗೆ, 4100 ರೀಲೆ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಹಾಗೂ ಹ್ಯಾಮರ್ ಥ್ರೋ ತೃತೀಯ ಸ್ಥಾನ ಗಳಿಸಿದ್ದಾರೆ.
ವಿಜೇತರಿಗೆ ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ಸದಸ್ಯ ಎಂ.ಪಿ.ರತ್ನಾಕರ್ ಪ್ರಶಸ್ತಿ ವಿತರಿಸಿದರು. ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಿ.ವಿ.ರಮೇಶ್ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯಶಿಕ್ಷಕ ಹರಿಹರ ಹೆಗಡೆ, ಶಿಕ್ಷಕರಾದ ಬಸವರಾಜ, ಭೈರಮ್ಮ, ಶಶಿಕಲಾ, ನಾಗರಾಜ್, ಲಲಿತಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮರಿಯಪ್ಪ ಹಾಗೂ ಸದಸ್ಯರು, ಗ್ರಾಮಸ್ಥರು ಮತ್ತು ಹಳೇ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.