

ಹಿರೀಸಾವೆ : ಪಟ್ಟಣದ ಗಂಗಾಧರ್ ಕ್ರೀಡಾಂಗಣದಲ್ಲಿ ಆ.20 ಹಾಗೂ ಆ.21 ರಂದು ನಡೆದ 2024-2025 ನೇ ಸಾಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ದಿಡಗ ಗ್ರಾಮದ ಹೊಯ್ಸಳ ಹಿರಿಯ ಪ್ರಾಥಮಿಕ ಶಾಲೆಯು ಶಾಲಾ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
ಬಾಲಕರ ವಿಭಾಗದಲ್ಲಿ ಥ್ರೋಬಾಲ್(ಪ್ರಥಮ), ಖೋಖೋ(ಪ್ರಥಮ), ರಿಲೆ(ದ್ವಿತೀಯ), 100 ಮೀ(ಪ್ರಥಮ), 200ಮೀ(ದ್ವಿತೀಯ), 600 ಮೀ(ಪ್ರಥಮ) ಹಾಗೂ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್(ಪ್ರಥಮ), ಖೋಖೋ(ಪ್ರಥಮ), 100 ಮೀ(ತೃತೀಯ), 200 ಮೀ(ದ್ವಿತೀಯ), 400 ಮೀ(ಪ್ರಥಮ), 600 ಮೀ(ತೃತೀಯ) ಹಾಗೂ ರಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ವೈಯಕ್ತಿಕ ವಿಭಾಗದಲ್ಲಿ ಕಬ್ಬಳಿ ಶ್ರೀಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕರಲ್ಲಿ ಯಶಸ್-200 ಮೀ(ಪ್ರಥಮ), ರಂಜಿತ್-400 ಮೀ(ತೃತೀಯ) ಹಾಗೂ ಎಂ.ಕೆ.ಧನುಶ್‌ಗೌಡ-400 ಮೀ(ಪ್ರಥಮ) ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಇಂಚರಾ-600 ಮೀ(ಪ್ರಥಮ), ಆರಾಧ್ಯ-100 ಮೀ(ದ್ವಿತೀಯ), ಸಾನಿಕಾ-200 ಮೀ(ತೃತೀಯ) ಮತ್ತು 400 ಮೀ(ತೃತೀಯ), ಕೀರ್ತನಾ-ತಟ್ಟೆ ಎಸೆತ(ಪ್ರಥಮ) ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹಿರೀಸಾವೆ ಜ್ಞಾನಪ್ರಭ ಶಾಲೆಯ ಬಾಲಕಿಯರ ವಿಭಾಗದಲ್ಲಿ 100 ಮೀ(ಪ್ರಥಮ), 200 ಮೀ(ಪ್ರಥಮ), 400 ಮೀ(ದ್ವಿತೀಯ) ಸ್ಥಾನ ಪಡೆದುಕೊಂಡಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸ್ವರ್ಧೆ ಎಂದಮೇಲೆ ಸೋಲು ಹಾಗೂ ಗೆಲುವು ಇದ್ದೇ ಇರುತ್ತದೆ. ಗೆಲುವು ಸಂತಸ ತಂದರೆ ಸೋಲು ನೂರು ಪಾಠ ಕಲಿಸುತ್ತದೆ. ಯಾವುದಕ್ಕೂ ಅಂಜದೆ ಕಠಿಣ ಪರಿಶ್ರಮ ಹಾಗೂ ಅಭ್ಯಾಸದೊಂದಿಗೆ ಹೆಜ್ಜೆ ಇರಿಸಿದರೆ ಯಾವುದೇ ಸ್ವರ್ಧೆಯಲ್ಲಿ ಬಾಗವಹಿಸಿದರೂ ಸುಲಭದಲ್ಲಿ ನಿರೀಕ್ಷೆಯ ಗುರಿ ದಾಟಿ ಎಲ್ಲವನ್ನೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳನ್ನು ಉರಿದುಂಬಿಸಿದರು.
ಜ್ಞಾನಪ್ರಭ ಶಾಲೆಯ ಅಧ್ಯಕ್ಷ ಎ.ಜಿ.ಪ್ರಭಾಕರ್ ಮಾತನಾಡಿ, ಹೋಬಳಿ ವ್ಯಾಪ್ತಿಯಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಹೊಂದಿರುವ ಸರ್ಕಾರಿ ಹಿರಿಯ ಪಾಠಶಾಲೆಗಳಿಗೆ ತಲಾ ಒಂದು ಫಿಲ್ಟರ್(ಕುಡಿಯುವ ನೀರಿನ ಶುದ್ಧೀಕರಣ ಯಂತ್ರ) ಹಾಗೂ 500 ಲೀಟರ್ ಸಾಮರ್ಥ್ಯ ಹೊಂದಿರುವ ನೀರಿನ ಟ್ಯಾಂಕ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಶ್ರೀನಿವಾಸ್, ದಿಡಗ ಕ್ಲಸ್ಟರ್‌ನ ಸಿಆರ್‌ಪಿ ಧರ್ಮಪಾಲ್, ಹೊಯ್ಸಳ ವಿದ್ಯಾಸಂಸ್ಥೆಯ ಅಧ್ಯಕ್ಷ ಮೆಡಿಕಲ್ ರಾಮೇಗೌಡ, ಮುಖ್ಯಶಿಕ್ಷಕ ಬಿ.ಎಚ್.ನಂದೀಶ್, ಕ್ರೀಡಾ ತರಬೇತಿದಾರ ರವೀಶ್ ಹಾಗೂ ಇತರರು ಇದ್ದರು.