ಕಾಂಪೌಂಡ್ ಕುಸಿತ, 12 ಬೈಕ್ ಜಖಂ

145
Published on

ಬೆಳಗಾವಿ: ವಾಣಿಜ್ಯ ಮಳಿಗೆ ನಿರ್ಮಾಣವಾಗುತ್ತಿರುವ ಟಿಳಕವಾಡಿಯ ಕಲಾಮಂದಿರದ ಆವರಣದಲ್ಲಿನ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ 12 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಮಹಾನಗರ ಪಾಲಿಕೆಯ ವ್ಯಾಪ್ತಿಯ ಟಿಳಕವಾಡಿ ಕಲಾಮಂದಿರ ಕಟ್ಟಡದ ಆವರಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಬಹುಮಹಡಿ ವಾಣಿಜ್ಯ ಮಳಿಗೆ ನಿರ್ಮಾಣಗೊಳ್ಳುತ್ತಿದೆ.

ಇದೇ ಸಂದರ್ಭದಲ್ಲಿ ಕಲಾಮಂದಿರ ಪಕ್ಕದ ಕಾಂಪ್ಲೆಕ್ಸ್‌ಗೆ ಹೊಂದಿಕೊಂಡಿರುವ ಆಳೆತ್ತರದ ಕಾಂಪೌಂಡ್ ಗೋಡೆ ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಕುಸಿದಿದೆ. ಗೋಡೆ ಪಕ್ಕದಲ್ಲಿ ಸಾಲಾಗಿ ನಿಂತಿದ್ದ ವಾಹನಗಳ ಪೈಕಿ 12 ಬೈಕ್‌ಗಳು ಗೋಡೆ ಮಣ್ಣಿನ ಅಡಿ ಸಿಲುಕಿಕೊಂಡು ಹಾನಿಗೀಡಾಗಿವೆ. ಕಲಾಮಂದಿರ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ಭಾರಿ ಪ್ರಮಾಣದ ಮಣ್ಣು ಕಾಂಪೌಂಡ್ ಗೋಡೆ ಸುತ್ತ ಹಾಕಿದ್ದರಿಂದ ಒತ್ತಡ ತಡೆಯಲಾರದೆ ಗೋಡೆ ಕುಸಿದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net