ಭಾರಿ ಮಳೆಗೆ ಕುಸಿದ ಕಾಂಪೌಂಡ್

1 .vpt 1
ವಿರಾಜಪೇಟೆಯ ದಖ್ಖನಿ ಮೊಹಲ್ಲಾದಲ್ಲಿ ಕುಸಿದ ಕಾಂಪೌಂಡ್.
Published on

ವಿರಾಜಪೇಟೆ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ 3ನೇ ವಾರ್ಡ್‌ನ ದಖ್ಖನಿ ಮೊಹಲ್ಲಾದಲ್ಲಿ ಅರುಣ ಎಂಬುವರಿಗೆ ಸೇರಿದ ಮನೆಯ ಕಾಂಪೌಂಡ್ ಭಾಗಶಃ ಕುಸಿದಿದೆ.

ಇದರ ಪರಿಣಾಮವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಸೋಮಣ್ಣ ಅವರ ಕಾರಿನ ಮೇಲೆ ಮಣ್ಣು-ಕಲ್ಲು ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಪುರಸಭಾ ಸದಸ್ಯ ರಾಜೇಶ್ ಪದ್ಮನಾಭ, ಮುಖ್ಯಾಧಿಕಾರಿ ಚಂದ್ರಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪುರಸಭಾ ಸಿಬ್ಬಂದಿ ಸೋಮವಾರ ಮಣ್ಣು ತೆರವು ಕಾರ್ಯ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net