ಕಾಂಪೌಂಡ್ ಮೇಲಿನ ಚಿತ್ರಕಲೆ ಸ್ತುತ್ಯಾರ್ಹ

3..7
ಅಥಣಿ ಬಸ್ ನಿಲ್ದಾಣದ ಕಾಂಪೌಂಡ್ ಮೇಲೆ ಬಿಡಿಸಿದ ಕಲಾಕೃತಿಗಳನ್ನು ಶಾಸಕ ಲಕ್ಷ್ಮಣ ಸವದಿ, ಎಲ್.ಎನ್.ಬಣಜವಾಡ, ಅನಿತಾ ಬಣಜವಾಡ, ಪ್ರಕಾಶ ಚಿಂಚಲಿ, ಪ್ರಕಾಶ ಪಾಟೀಲ, ಸಂಜು ಪಾರ್ಥನಹಳ್ಳಿ ವೀಕ್ಷಿಸಿದರು.
Published on

ಅಥಣಿ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಕಾಂಪೌಂಡ್ ಗೋಡೆಯ ಮೇಲೆ ಸ್ವಂತ ಖರ್ಚಿನಲ್ಲಿ ದೇಶ ಮತ್ತು ರಾಜ್ಯ ಪ್ರತಿನಿಸುವ ಸಾಂಸ್ಕೃತಿಕ ಮತ್ತು ಐತಿಹಾಸಿಕ ವಿಷಯಗಳನ್ನು ಚಿತ್ರಕಲೆ ಮೂಲಕ ಪ್ರದರ್ಶನಕ್ಕೆ ಮುಂದಾಗಿರುವ ಬಣಜವಾಡ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.


ಪಟ್ಟಣದ ಬಣಜವಾಡ ಶಿಕ್ಷಣ ಸಂಸ್ಥೆ ಯಿಂದ ಗಾಂ ಜಯಂತಿ ಅಂಗವಾಗಿ ಸರ್ಕಾರಿ ಬಸ್ ನಿಲ್ದಾಣದ ಕಾಂಪೌಂಡ್ ಗೋಡೆ ಮೇಲೆ ಬಿಡಿಸಿದ್ದ ಚಿತ್ರಗಳನ್ನು
ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.


ಹಂಪಿ ದೇವಸ್ಥಾನ, ಚಂದ್ರಯಾನ-3, ಮಹಾತ್ಮ ಗಾಂೀಜಿ, ಕರ್ನಾಟಕ ಹೈಕೋರ್ಟ್, ವಿಧಾನ ಸೌಧ ಸೇರಿ ಅನೇಕ ಉತ್ತಮ ಕಲಾಕೃತಿಗಳು ಮೂಡಿ ಬಂದಿವೆ ಎಂದರು. ಸಂಸ್ಥೆಯ ಅಧ್ಯಕ್ಷ ಎಲ್.ಎನ್.ಬಣಜವಾಡ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಅನಿತಾ ಬಣಜವಾಡ, ಪ್ರಕಾಶ ಚಿಂಚಲಿ, ಪ್ರಕಾಶ ಪಾಟೀಲ, ಸಂಜು ಪಾರ್ಥನಹಳ್ಳಿ, ಮಾಯಾ ನಿಶಾನದಾರ,ಪುರಸಭಾ ಸದಸ್ಯರಾದ ರಾಜು ಗುಡೋಡಗಿ, ಮಲ್ಲು ಹುದ್ದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net